
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38) ನಿಧನರಾಗಿದ್ದಾರೆ.
ಪ್ರತೀಕ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಪ್ರತೀಕ್ ಯಾದವ್ ಅವರು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರ ನಿಗೂಢ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪ್ರತೀಕ್ ಅವರು ರಾಜಕೀಯದಿಂದ ಸದಾ ದೂರವೇ ಉಳಿದಿದ್ದರು. ಅವರು ಮೂಲತಃ ಒಬ್ಬ ಯಶಸ್ವಿ ಉದ್ಯಮಿ ಮತ್ತು ಫಿಟ್ನೆಸ್ ಪ್ರೇಮಿಯಾಗಿ ಗುರುತಿಸಿಕೊಂಡಿದ್ದರು. ಇವರ ಪತ್ನಿ ಅಪರ್ಣಾ ಯಾದವ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಪ್ರಸ್ತುತ ಬಿಜೆಪಿ ನಾಯಕಿಯಾಗಿದ್ದಾರೆ.
ಪ್ರತೀಕ್ ಯಾದವ್ ಅವರ ನಿಧನದ ಸುದ್ದಿ ಯಾದವ್ ಕುಟುಂಬದ ಅಭಿಮಾನಿಗಳು ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಶೋಕ ಮೂಡಿಸಿದೆ. ಪ್ರತೀಕ್ ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ಅಖಿಲೇಶ್ ಯಾದವ್ ಸೇರಿದಂತೆ ಕುಟುಂಬದ ಇತರ ಸದಸ್ಯರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.


