*ಸ್ವಚ್ಛ ಬೆಳಗಾವಿ ಕಾರ್ಯಕ್ರಮದ ಆಯೋಜಕರಿಗೆ ಶಾಕ್ ನೀಡಿದ ಬೆಳಗಾವಿ ಪಾಲಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಮೇ 17ರಂದು ಶಿವಂ ಅಸೋಸಿಯೇಷನ್ ವತಿಯಿಂದ ನಡೆಯಲಿರುವ ‘ಸ್ವಚ್ಛ ಬೆಳಗಾವಿ ಸಂಭ್ರಮ’ ಕಾರ್ಯಕ್ರಮಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಕ್ ನೀಡಿದೆ.
ನಗರದಲ್ಲಿ ಕಾರ್ಯಕ್ರಮದ ಪ್ರಚಾರವಾಗಿ ಅಳವಡಿಸಿರುವ ಬ್ಯಾನರ್ ಗಳಿಗೆ ಅನುಮತಿ ಇಲ್ಲದಿದ್ರು ಅಳಗವಡಿಕೆ ಮಾಡಲಾಗಿದೆ. ಹಾಗಾಗಿ ಬ್ಯಾನರ್ ತೆರವುಗೊಳಿಸುವ ಮೂಲಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು, ನಗರದ ಸೌಂದರ್ಯಕ್ಕೆ ಧಕ್ಕೆ ತರುವಂತೆ ಅನುಮತಿ ಇಲ್ಲದೆ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರು, “ನಗರದಲ್ಲಿ ಅನಧಿಕೃತ ಬ್ಯಾನರ್ ಹಾಗೂ ಪ್ಲೆಕ್ಸ್ ಅಳವಡಿಕೆ ನಿಯಮಬಾಹಿರವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬ್ಯಾನರ್‌ಗಳ ತೆರವು ಆಗುತ್ತಿದಂತೆ ಸ್ಥಳಕ್ಕೆ ದೌಡಾಸಿ ಬಂದ ಆಯೋಜಕರು, ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಸ್ವಚ್ಛತಾ ಕಾರ್ಯಕ್ಕೆ ಅನುಮತಿ ಯಾಕೆ ಬೇಕು. ನಾವು ಅನುಮತಿ ಕೇಳಿದರು ಪಾಲಿಕೆ ಉದ್ದೇಶಪೂರ್ವಕವಾಗಿ ಅನುಮತಿ ನೀಡುತ್ತಿಲ್ಲ ಎಂದು ಕಾರ್ಯಕ್ರಮದ ಆಯೋಜಕರಾದ ಅಭಿಲಾಷ್ ಅವರು ಆರೋಪಿಸಿದ್ದಾರೆ.



