
ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿಯಾಗಿದ್ದು, ಇದರ ಬೆನ್ನಲ್ಲೇ ನೈಸರ್ಗಿಕ ಅನಿಲ (CNG) ದರದಲ್ಲಿಯೂ ಮತ್ತೆ ಏರಿಕೆಯಾಗಿದೆ.
ಕಳೆದ ಹತ್ತು ದಿನಗಳಲ್ಲಿ ಪೇಟ್ರೋಲ್ ಹಾಗೂ ಡೀಸೆಲ್ ದರ ಮೂರನೇ ಬಾರಿಕೆ ಹೆಚ್ಚಳವಾಗಿದೆ. ಪೆಟ್ರೋಲ್ ದರ 85 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಎನ್ ಜಿ ದರವನ್ನೂ ಏರಿಸಲಾಗಿದೆ.
ಕಳೆದ 9 ದಿನಗಳಲ್ಲಿ ಸಿಎನ್ ಜಿ ದರ ಮೂರನೆ ಬಾರಿಗೆ ಏರ್ಕೆಯಾಗಿದೆ. ಕೆಜಿ ಸಿಎನ್ ಜಿ ದರದಲ್ಲಿ 81.09 ಪೈಸೆ ಹೆಚ್ಚಿಸಲಾಗಿದೆ. ಇದರಿಂದಾಗಿ ಆಟೋ, ಕ್ಯಾಬ್ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ದುನಿಯಾದಲ್ಲಿ ದಿನದಿಂದ ದಿನಕ್ಕೆ ಬಡುಕು ದುಸ್ತರವಾಗುತ್ತಿದೆ.



