
ಪ್ರಗತಿವಾಹಿನಿ ಸುದ್ದಿ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ಏಳು ಜನ ಮೀನುಗಾರರನ್ನರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆಯಾಗಿ ಅವಘಡ ಸಂಭವಿಸಿದೆ. ಅಂಕೋಲದ ಬೆಳಂಬಾರ ಕಡಲತೀರದಿಂದ ಮೀನುಗಾರಿಕೆಗೆ ಹೊರಟಿದ್ದ ಮಂಜುನಾಥ್ ಕಾರ್ವಿ ಎಂಬವರ ಮಾಲೀಕತ್ವದ ಶ್ರೀ ನವರತ್ನ ಹೆಸರಿನ ಬೋಟ್ ತಾರೇಬಾಗಿಲು ಸಮೀಪ ಮುಳುಗಡೆಯಾಗಿದೆ.
ಮೀನುಗಾರಿಕೆ ನಡೆಸುವಾಗ ಬೋಟಿನ ಹೊರಭಾಗಕ್ಕೆ ಹಾನಿಯಾದ್ದರಿಂದ ಬೋಟ್ ಒಳಗೆ ನೀರು ತುಂಬಿ ಮುಳುಗಡೆಯಾಗಿದೆ. ತಕ್ಷಣ ಸ್ಥಳೀಯ ಮೀನುಗಾರಿಕಾ ಬೋಟ್‌ನ ಇಕ್ಬಾಲ್ ಅಬ್ದುಲ್ ಗಫೂರ್ ಎಂಬುವವರು ತಮ್ಮ ಬೋಟ್‌ನಿಂದ ಏಳುಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ.
ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಎಂಬ ಮೀನುಗಾರರನ್ನು ರಕ್ಷಿಸಲಾಗಿದೆ. ಬೋಟ್ ಹೊನ್ನಾವರ ಸಿಎಸ್‌ಪಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



