Belagavi NewsBelgaum NewsKannada NewsKarnataka NewsNationalPolitics

*ಹಿಡಕಲ್ ಜಲಾಶಯದ ಸೌಂದರ್ಯ ಸವಿಯಲು ಹೋಗಿದ್ದ ಯುವಕನ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು 11 ಜನ ಸೇರಿ ಕೊಚ್ಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಬಳಿ ಘಟನೆ ನಡೆದದ್ದು, ಕೊಲೆಯಾದ ಯುವಕನನ್ನು ಫಾಸ್ಕಲ್ ಹೃದಯ್ ರಾಜ್ ಮುತ್ತುಸ್ವಾಮಿ (31) ಎಂದು ಗುರುತಿಸಲಾಗಿದೆ.ಮೃತ ಫಾಸ್ಕಲ್ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಣಿಕವಾಡಿ ನಿವಾಸಿ ಎಂದು ತಿಳಿದು ಬಂದಿದೆ. 

Home add -Advt

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಫಾಸ್ಕಲ್ ನನ್ನು ಕೊಲೆ ಮಾಡಿ ಗ್ಯಾಂಗ್ ಪರಾರಿಯಾಗಿದೆ. ಒಟ್ಟು
ಸುಮಾರು 11 ಜನರ ತಂಡ ಫಾಸ್ಕಲ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ.

ಯುವಕ ನಿಸರ್ಗ ಸೌಂದರ್ಯ ಸವಿಯೋಣ ಎಂದು ಹಿಡಕಲ್ ಜಲಾಶಯದ ಬಳಿ ಗೆಳೆಯರೊಂದಿಗೆ ಹೋಗಿದ್ದ ಇದೇ ವೇಳೆ ಮಾರಕಾಸ್ತ್ರಗಳಿಂದ ಫಾಸ್ಕಲ್ ಮೇಲೆ ದಾಳಿ ಮಾಡಿ ಗ್ಯಾಂಗ್ ಪರಾರಿಯಾಗಿದೆ.

ಈ ವೇಳೆ ಗಂಗಪ್ಪ ನಾಯಿಕ್, ರಾಹುಲ್,ನಾಗೇಶ್ ನಾಯಿಕ್, ಪ್ರಜ್ವಲ್, ಸೇರಿ ಇನ್ನಿತರರು ಸ್ಥಳಕ್ಕೆ ಬಂದು ಫಾಸ್ಕಲ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ
ಯಮಕನಮರಡಿ ಪೊಲೀಸರು ಏಳು ಜ‌ನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಕೊಲೆಯ ಹಿಂದಿನ ರಹಸ್ಯಗಳು ಇನ್ನೂ ಹೊರಬರಬೇಕಿದ್ದು ಕೊಲೆ ಆರೋಪಿಗಳನ್ನು ಬಾಯ್ ಬಿಡಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಒಟ್ಟಿನಲ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡಿ ಯುವಕ ಮಸಣ ಸೇರಿದ್ದಾರೆ.

Related Articles

Back to top button