*ಮಾವಿನ ಹಣ್ಣಿನ ಬೆಲೆ ಕುಸಿತ: ರಸ್ತೆಗೆ ಮಾವಿನ ಹಣ್ಣು ಸುರಿದು ಬೆಂಬಲ ಬೆಲೆಗೆ ಆಗ್ರಹಿಸಿ ಮಾವು ಬೆಳೆಗಾರರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಮಾವಿನ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರು ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ರಾಜ್ಯದ ಮಾವಿನ ತವರು ಕೋಲಾರದಲ್ಲಿ ಮಾವು ಬೆಳೆಗಾರರು, ರೈತರು ಟ್ರ್ಯಾಕ್ಟರ್ ಗಳಲಿ ಮಾವಿನ ಹಣ್ಣು ತಂದು ರಸ್ತೆ ಮೇಲೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಬೆಳೆಯುವ ಉತ್ಕೃಷ್ಟವಾದ ವಿವಿಧ ತಳಿಯ ಮಾವಿನ ಹಣ್ಣುಗಳು ವಿಶ್ವ ಪ್ರಸಿದ್ದಿ ಪಡೆದಿವೆ. ಇಂತಹ ಮಾವಿನ ಹಣ್ಣಿನ ಸೀಸನ್ ನಲ್ಲೇ ಆರಂಭದಲ್ಲೇ ಮಾವಿನ ಹಣ್ಣಿನ ಬೆಲೆ ಕುಸಿತವಾಗಿದೆ. ಹಣ್ಣುಗಳ ರಾಜ ಮಾವಿಗೆ ಬೆಂಬಲ ಬೆಲೆ ಅಥವಾ ಕನಿಷ್ಟ 10 ಸಾವಿರ ನೀಡುವಂತೆ ಒತ್ತಾಯಯಿಸಿ ಇಂದು ಕೋಲಾರ ಬಂದ್ಗೆ ಕರೆ ನೀಡಲಾಗಿದೆ.
ಮಾವಿನ ತವರು ಶ್ರೀನಿವಾಸಪುರದ ಮಾವು ಬೆಳೆಗಾರರಿಗೆ ಬೆಲೆ ಕುಸುತ, ಬೇಸಿಗೆಯ ಬಿಸಿಲು, ಕಳೆದ ತಿಂಗಳು ಸುರಿದ ಆಲಿಕಲ್ಲು ಸಹಿತ ಮಳೆ ಗಾಯದ ಮೇಲೆ ಬರೆ ಎಳೆದ್ಂತಾಗಿದೆ. ಈ ಬಾರಿ ಸುಮಾರು 60ರಿಂದ 70ರಷ್ಟು ಮಾವಿನ ಫಸಲು ಹಾಳಾಗಿ ಹೋಗಿದೆ. ಉಳಿದಿರುವ ಕೇವಲ 30ರಷ್ಟು ಮಾವಿನ ಫಸಲಿಗೆ ಉತ್ತಮ ಬೆಲೆ ಬರುತ್ತದೆ ಎಂದು ಎಲ್ಲರೂ ನಿರೀಕ್ಷೆ ಹೊಂದಿದ್ದರು. ಆದರೆ ಮಾವು ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತವಾಗಿದೆ.
ತೋತಾಪುರಿ, ಮಲಗೋವಾ, ಬೇನಿಷಾ, ರಸಪುರಿ, ಮಲ್ಲಿಕಾ ಸೇರಿದಂತೆ ಎಲ್ಲಾ ಮಾವಿನ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿ ದಾಟುತ್ತಿಲ್ಲ. ಇದರಿಂದರೈತರು ಕಂಗಾಲಾಗಿದ್ದಾರೆ. ಕನಿಷ್ಟ ಟನ್ಗೆ 10 ಸಾವಿರ ರೂ. ನೀಡಬೇಕು. ಇಲ್ಲವಾದಲ್ಲಿ ಬೆಂಬಲ ಬೆಲೆ ನೀಡುವ ಮೂಲಕ ರೈತರ ನೆರವಿಗೆ ನಿಲ್ಲಬೇಕು. ಅಲ್ಲದೇ ಸ್ಥಳೀಯವಾಗಿ ಮಾವು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಬೇಕೆಂದು ರೈತರು ಒತ್ತಾಯಿಸಿ ಮಾವು ಬೆಳೆಗರರು ಪ್ರತಿಭಟನೆ ನಡೆಸಿದ್ದಾರೆ.
ಟ್ರ್ಯಾಕ್ಟರ್ ಗಳಲ್ಲಿ ಮಾವಿನ ಹಣ್ಣನ್ನು ತಂದು ಹೆದ್ದಾರಿಗೆ ಸುರಿದು ಪ್ರತಿಭಟಿಸಿದ್ದಾರೆ. ಅಲ್ಲದೇ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.




