Belagavi NewsBelgaum NewsCrimeKannada NewsKarnataka NewsNational

*ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಪೊಲೀಸ್ ಕಮೀಷನರೇಟ್ ಘಟಕದಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳಲ್ಲಿ ಜಪ್ತಾದ ಮಾದಕ ವಸ್ತುಗಳಾದ 10,76,500 ರೂ ಮೌಲ್ಯದ 24ಕೆಜಿಗೂ ಅಧಿಕ ಗಾಂಜಾ (15 ಪ್ರಕರಣಗಳಲ್ಲಿ), 8,02,400 ರೂ. ಮೌಲ್ಯದ 120ಗ್ರಾಂ ಮತ್ತು 83ಮಿಲಿಗ್ರಾಂ ಹೆರಾಯಿನ್ (08 ಪ್ರಕರಣಗಳಲ್ಲಿ), 39,00,000 ರೂ ಮೌಲ್ಯದ ಹಶೀಶ 13 ಕೆಜಿ ಮತ್ತು 945ಗ್ರಾಂ ನಿದ್ರಾಜನಕ ವಸ್ತುಗಳನ್ನು ನಾಶಪಡಿಸಲಾಗಿದೆ. 

Home add -Advt

Related Articles

Back to top button