Belagavi NewsBelgaum NewsKannada NewsKarnataka NewsLatest

*ವಿವಿಧ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪ್ರತಿ ವರ್ಷದಂತೆ 2025ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳನ್ನು ವಿವಿಧ ದತ್ತಿ ನಿಧಿ ಪ್ರಶಸ್ತಿಗಳಿಗಾಗಿ ಆಹ್ವಾನಿಸಿದೆ. ಸಾಹಿತ್ಯದ ಎಲ್ಲ ಪ್ರಕಾರದ ಪುಸ್ತಕಗಳು ಪ್ರಶಸ್ತಿಗೆ ಅರ್ಹವಾಗಿರುತ್ತವೆ.
ಕೃತಿಕಾರರು ಬೆಳಗಾವಿ ಜಿಲ್ಲೆಯವರು ಆಗಿರಬೇಕು. ವಿಳಾಸ ಮತ್ತು ಮೊಬೈಲ್ ನಂಬರ್ ನೊಂದಿಗೆ ಕಡ್ಡಾಯವಾಗಿ ಪ್ರಕಟಿತ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಕಾರರು, ಸಾಹಿತಿಗಳು, ಲೇಖಕರು ತಮ್ಮ ಪುಸ್ತಕಗಳನ್ನು -ನಂಬರ್: 255, ವಿಜಯಾ ರೆಸಿಡೆನ್ಸಿ , ಎಫ್-2, ಗುರುಪ್ರಸಾದ್ ಕಾಲೊನಿ, ಟಿಳಕವಾಡಿ, ಬೆಳಗಾವಿ, 590006. ಈ ವಿಳಾಸಕ್ಕೆ ಆಗಸ್ಟ್ 15 ರೊಳಗೆ ಕಳುಹಿಸಬೇಕು ಎಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ನೀರಜಾ ನಾರಾಯಣ ಗಣಾಚಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9481656405, 9448634440, 9448627797 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Related Articles

Back to top button