CrimeKarnataka NewsLatest

*ನಿರುದ್ಯೋಗಿಗಳೇ ಇವರ ಟಾರ್ಗೆಟ್: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ವಂಚನೆ*

ದಂಪತಿ ಅರೆಸ್ಟ್


ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕ ಉದ್ಯೋಗಾಕಾಂಕ್ಷಿಗಳಿಂದ ಕೋಟಿಗಟ್ಟಲೆ ಹಣ ವಂಚಿಸಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

Related Articles
Home add -Advt

ಬೆಂಗಳೂರಿನ ದೊಡ್ಡಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಚಿನ್ ಮತ್ತು ಸುಜಾತಾ ಎಂಬ ದಂಪತಿ ಈ ವಂಚನೆ ಜಾಲದ ಮುಖ್ಯಸ್ಥರಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜನರನ್ನು ಟಾರ್ಗೆಟ್ ಮಾಡಿದ್ದರು.

ಎಫ್‌ಡಿಸಿ, ಎಸ್‌ಡಿಸಿ, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಜನರಿಂದ ಸುಮಾರು 1.2 ಕೋಟಿ ರೂಪಾಯಿ ವಸೂಲಿ ಮಾಡಿದ್ದರು. ಪ್ರತಿ ಉದ್ಯೋಗಾಕಾಂಕ್ಷಿಯಿಂದ 3.5 ಲಕ್ಷ ರೂಪಾಯಿ ಪಡೆದು ನಕಲಿ ದಾಖಲೆಪತ್ರಗಳು, ಐಡಿ ಕಾರ್ಡ್‌ಗಳು ಮತ್ತು ನೇಮಕಾತಿ ಪತ್ರಗಳನ್ನು ನೀಡಿದ್ದರು. ನಕಲಿ ದಾಖಲೆಗಳನ್ನು ಮುದ್ರಿಸಲು ದುರ್ಗಿಗುಡಿಯ ಶ್ರೀಸಾಯಿ ಆಫ್‌ಸೆಟ್ ಪ್ರಿಂಟರ್ಸ್‌ ಅನ್ನು ಬಳಸಿಕೊಳ್ಳಲಾಗಿತ್ತು. ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಸಚಿನ್ ಮತ್ತು ಸುಜಾತಾ ಅವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.

Related Articles

Back to top button