Belagavi NewsBelgaum NewsKannada NewsKarnataka NewsNationalPolitics
*ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಿದ ಮಾಲಿನ್ಯ ನಿಯಂತ್ರಣ ಮಂಡಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಕೇಶ್ವರದ ಪ್ರತಿಷ್ಠಿತ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಶಾಕ್ ನೀಡಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬೆಳಗಾವಿ ಡಿಸಿ ಮೊಹಮ್ಮದ್ ರೋಶನ್ ಅವರ ಆದೇಶದಂತೆ ಹುಕ್ಕೇರಿ ತಹಸೀಲ್ದಾರ ಬಲರಾಮ ಕಟ್ಟಿಮನಿ ನೇತೃತ್ವದಲ್ಲಿ ಚಿಕ್ಕೋಡಿಯ ಪರಿಸರ ನಿಯಂತ್ರಣ ಅಧಿಕಾರಿಗಳಾದ ಕೆ.ಎಸ್.ಪೂರ್ಣಿಮಾ ಹಾಗೂ ಹುಕ್ಕೇರಿ ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಸಂಕೇಶ್ವರದ ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ ಮಠದ ಸೇರಿದಂತೆ ಅನೇಕ ಅಧಿಕಾರಿಗಳು ನೇತೃತ್ವದಲ್ಲಿ ಸಕ್ಕರೆ ಉತ್ಪಾದನೆ ಘಟಕ, ಕೋಜನ್, ಡಿಸ್ಟಲರಿ ಉತ್ಪಾದಕ ಘಟಗಳ ಕಂಟ್ರೋಲ್ ಪ್ಯಾನಲ್ ಗಳನ್ನು ಸೀಜ್ ಮಾಡಲಾಗಿದೆ.
ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಸೀಜ್ ಕುರಿತು ಬರುವ ದಿನಾಂಕ 16 ರಂದು ಬೆಂಗಳೂರಿನಲ್ಲಿ ವಿಚಾರಣೆ ನಡೆಯಲಿದೆ ಎನ್ನಲಾಗಿದೆ.




