Belagavi NewsBelgaum NewsKannada NewsKarnataka News

*ಎಸ್ಐಆರ್ : ಉತ್ತಮವಾಗಿ ನಿರ್ವಹಿಸಿ ಜಿಲ್ಲೆಗೆ ಶ್ರೇಷ್ಠ ಸ್ಥಾನ ತರಬೇಕು-ಡಿಸಿ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ : ಎಸ್ಐಆರ್ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿ ಜಿಲ್ಲೆಗೆ ಶ್ರೇಷ್ಠ ಸ್ಥಾನ ತರಬೇಕೆಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ(ಜು.18) ನಡೆದ ಉತ್ತರ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು,  ಮೇಲ್ವಿಚಾರಕರು,ಬಿಎಲ್ಓಗಳು ಸೇರಿದಂತೆ ಎಸ್ಐಆರ್ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವೆಲ್ಲರೂ ಈಗಾಗಲೇ ಉತ್ತಮ ಕಾರ್ಯ ಮಾಡುತ್ತಿದ್ದು, ಪ್ರಗತಿ ಕಂಡುಬರುತ್ತಿದೆ. ಮುಂದಿನ ಕಾರ್ಯವನ್ನು ಸಹ ಲೋಪಗಳಾಗದಂತೆ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಮುಗಿಸಬೇಕೆಂದು ತಿಳಿಸಿದರು. 

ಪ್ರೊಬೇಷನರಿ ಐ ಎ ಎಸ್ ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಡಿಸಿ ವಿಜಯಕುಮಾರ ಹೊನಕೇರಿ, ನಗರಾಭಿವೃದ್ಧಿ ಕೋಶದ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ವಿಭಾಗದ ಉಪಯುಕ್ತ ಉದಯ ಕುಮಾರ ಟಿ. ಇತರರು ಇದ್ದರು. 

ಸಭೆಯ ನಂತರ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆಗೆ ಸೌಜನ್ಯದ ಭೇಟಿ ನೀಡಿ ವಿವಿಧ ವಿಭಾಗಗಳನ್ನು ವೀಕ್ಷಿಸಿದರು. 

Home add -Advt

Related Articles

Back to top button