*ಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ ಉದ್ಘಾಟನಾ ಸಮಾರಂಭ ಮುಂದೂಡಿಕೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸಂಸ್ಥೆಯು, ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹುಬ್ಬಳ್ಳಿಯ ಉದ್ಘಾಟನೆ ಹಾಗೂ ರಾಷ್ಟ್ರಾರ್ಪಣೆ ಸಮಾರಂಭವನ್ನು ಶನಿವಾರ, 25 ಜುಲೈ 2026 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಈ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಕೆಎಲ್‌ಇ ಸಂಸ್ಥೆಯು ಪ್ರಕಟಿಸಿದೆ.
ಈ ಸಮಾರಂಭವು ಉತ್ತರ ಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಬೇಕಾಗಿತ್ತು. ಸಮಾರಂಭದ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಈ ಮುಂದೂಡಿಕೆಯಿಂದ ಉಂಟಾಗಿರುವ ಯಾವುದೇ ಅನಾನುಕೂಲತೆಗೆ ಕೆಎಲ್‌ಇ ಸಂಸ್ಥೆಯು ವಿಷಾದ ವ್ಯಕ್ತಪಡಿಸುತ್ತದೆ. ಸಮಾರಂಭಕ್ಕೆ ಆಗಮಿಸಲು ಸಮ್ಮತಿಸಿದ್ದ ಗಣ್ಯರು, ಆಹ್ವಾನಿತರು, ಹಿತೈಷಿಗಳು, ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕರು ತೋರಿದ ಸಹಕಾರ, ನಿರಂತರ ಬೆಂಬಲ ಮತ್ತು ತಿಳುವಳಿಕೆಗೆ ಕೆಎಲ್‌ಇ ಸಂಸ್ಥೆಯು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.
Inauguration Ceremony of KLE JGMM Medical College & KLE Hospital, Hubballi Postponed
The Karnatak Lingayat Education (KLE) Society has announced that the inauguration and dedication ceremony of the KLE Jagadguru Gangadhar Mahaswamigalu Moorusavirmath Medical College and the KLE Hospital & Medical Research Centre, Hubballi, originally scheduled for Saturday, 25 July 2026, has been postponed due to unavoidable circumstances.
The event was to mark a significant milestone in the advancement of medical education and healthcare in North Karnataka. A revised date for the ceremony will be announced in due course.
KLE Society sincerely regrets any inconvenience caused and expresses its gratitude to all dignitaries, invitees, well-wishers, members of the media, and the public for their understanding, continued support, and cooperation.
