
ಪ್ರಗತಿವಾಹಿನಿ ಸುದ್ದಿ : ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣಾ ಸಮಯವನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಿ ನೂತನ ಸುತ್ತೋಲೆ ಹೊರಡಿಸಿರುವ ಆಹಾರ ಇಲಾಖೆ ರಾಜ್ಯದ ಬಿಪಿಎಲ್ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ನೀಡಿದೆ.
ಈ ನಿರ್ಧಾರದಿಂದ ದಿನಗೂಲಿ ನೌಕರರು, ಕೃಷಿಕರು ಹಾಗೂ ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಕೆಲಸಕ್ಕೆ ಧಕ್ಕೆಯಾಗದಂತೆ ಮುಂಜಾನೆ ಅಥವಾ ರಾತ್ರಿಯ ವೇಳೆಯಲ್ಲೂ ರೇಷನ್ ಪಡೆದುಕೊಳ್ಳಲು ಸಾಧ್ಯವಾಗಲಿದ್ದು ಒಂದೇ ಸಮಯದಲ್ಲಿ ಉಂಟಾಗುತ್ತಿದ್ದ ಇ-ಕೆವೈಸಿ, ಬಯೋಮೆಟ್ರಿಕ್ ಸರ್ವರ್ ಅಡೆತಡೆಗಳು ಮತ್ತು ಅಂಗಡಿಗಳ ಮುಂದಿನ ದೀರ್ಘ ಸರತಿ ಸಾಲುಗಳಿಗೆ ಶಾಶ್ವತ ಮುಕ್ತಿ ಸಿಗಲಿದೆ.
ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಈ ನೂತನ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರಿ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
