CrimeKannada NewsLatestNational

*ಅತ್ತಿಗೆಯ ಶಿರಚ್ಛೇದ ಮಾಡಿದ ಮೈದುನ*

ಪ್ರಗತಿವಾಹಿನಿ ಸುದ್ದಿ: ಊಟ ನೀಡಲು ತಡ ಮಾಡಿದ್ದಕ್ಕೆ ಮೈದುನ ಅತ್ತಿಗೆಯ ಶಿರಚ್ಛೇದ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಬಿಹಾರದ ಜೆಹಾನಾಬಾದ್ ಜಿಲ್ಲೆಯ ಪಾರ್ಸಾ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ ಈ ಕೊಲೆ ನಡೆದಿದೆ. 25 ವರ್ಷದ ಮಹಿಳೆ ಅಂಶು ದೇವಿಯನ್ನು ಆಕೆಯ ಮೈದುನ ಕುನಾಲ್ ಕುಮಾರ್ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. 

ಕುಟುಂಬದ ಇತರ ಸದಸ್ಯರು ಭತ್ತದ ನಾಟಿ ಮಾಡಲು ಗದ್ದೆಗೆ ಹೋಗಿದ್ದರು. ಆಕೆಯ ಮೈದುನ ಕುನಾಲ್ ಕುಮಾರ್ ಕೆಲಸದಿಂದ ಹಿಂತಿರುಗಿ ಊಟ ಕೇಳಿದ್ದಾನೆ. ಅತ್ತಿಗೆ ತಡವಾಗಿ ಊಟ ಬಡಿಸಿದ್ದಕ್ಕೆ ಕೋಪಗೊಂಡು ಜಗಳ ತೆಗೆದಿದ್ದಾನೆ.

ಜಗಳದ ವೇಳೆ ಆರೋಪಿ ಹರಿತವಾದ ಆಯುಧ ತೆಗೆದು ತನ್ನ ಅತ್ತಿಗೆ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಗ್ರಾಮದ ಹೊರವಲಯದಲ್ಲಿರುವ ಆಲದ ಮರದಲ್ಲಿ ಕತ್ತರಿಸಿದ ತಲೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಪಾರ್ಸಾ ಬಿಘಾ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಅಪರಾಧಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button