Belagavi NewsBelgaum NewsCrimeKannada NewsKarnataka NewsNational

*ಅಂದರ್ ಬಾಹರ್ ಅಡ್ಡೆ ಮೇಲೆ ಬೆಳಗಾವಿ ಪೊಲೀಸರ ದಾಳಿ: 15 ಜನ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಬೆಳಗಾವಿಯ ಗ್ರಾಮೀಣ ಪೊಲೀಸರು 15 ಜನ ಆರೋಪಿಗಳನ್ನು  ವಶಕ್ಕೆ ಪಡೆದಿದ್ದಾರೆ.

ಅಭಿಶೇಖ ರಘುನಾಥ ಬೋಸಲೆ (25), ಪರುಶರಾದಮ ದತ್ತಾರಾಮ ಸಿಂಧೆ (45), ರಾಹುಲ ಸದಾಶಿವ ಅಗಸಗೇಕರ (32) , ರೋಹಿತ ಪ್ರಹ್ಲಾದ ಕಾಂಬಳೆ (32), ಸಾಗರ ಅಶೋಕ ಪಾಟೀಲ (41), ಸುನೀಲ ಮಾರುತಿ ಪಾಟ್ರೋಟ (53), ಶುಭಂ ಸಂತೋಷ ಸಿಂಧೆ (22), ಪ್ರಕಾಶ ಪ್ರಭು ನಾಯಿಕ (40), ಪಿರಿಮಲ ಗಣೇಶ ಜಾಲಗಾರ (40) , ಭರಮಾ ಜಿನ್ನಪ್ಪ ಪಾಟೀಲ (26), ಮಹೇಶ ಈಶ್ವರ ಗೊರಲ (30), ವಿನಾಯಕ ಲಕ್ಷ್ಮಣ ಬಾದನ್ನವರ (33), ಶ್ರೀಕಾಂತ ರಾಜು ಬಗ್ಗೆ (35), ರೋಶನ ರವೀಂದ್ರ ಶಿಂಧೆ (30) ಹಾಗೂ ಮನೀಶ ಅಸೋಡೆಕರ (35) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಉ ವಾಘವಾಡೆ ಗ್ರಾಮದ ಮಾರ್ಖಂಡೆಯ ನಗರದ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಇಸ್ಪೀಟ ಆಟದಲ್ಲಿ ತೊಡಗಿದ್ದಾಗ, ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷ ದಳವಾಯಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ರೂ.69,150 ಹಣ ಹಾಗೂ ಇಸ್ಪೀಟ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ

ಜಪ್ತ ಪಡಿಸಿಕೊಂಡು ಆರೋಪಿತರ ವಿರುದ್ಧ ಬೆಳಗಾವಿ ಗ್ರಾಮಿಣ ಪೊಲೀಸ್ ಠಾಣೆ ಪ್ರ ಸಂ.118/2026 ಕಲಂ. 87 ಕೆ.ಪಿ. ಕಾಯ್ದೆ -1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಮೇಲಿನಂತೆ ದಾಳಿ ಕೈಗೊಂಡ ಪಿಎಸ್‌ಐ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Home add -Advt

Related Articles

Back to top button