Belagavi NewsBelgaum NewsKannada NewsKarnataka NewsLatest

*ಸಿಬಿಎಸ್‌ಇ ರಾಷ್ಟ್ರೀಯ ಈಜು ಸ್ಪರ್ಧೆಗೆ ಬೆಳಗಾವಿಯ ಆರೋಹಿ, ನಿಧಿ ಮತ್ತು ತನ್ವಿ ಆಯ್ಕೆ*


ಸಿಬಿಎಸ್‌ಇ ರಾಷ್ಟ್ರೀಯ ಈಜು ಸ್ಪರ್ಧೆಗೆ ಬೆಳಗಾವಿಯ ಆರೋಹಿ, ನಿಧಿ ಮತ್ತು ತನ್ವಿ ಆಯ್ಕೆ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ಕೇರಳದಲ್ಲಿ ಜುಲೈ 25 ರಿಂದ 29 ರವರೆಗೆ ನಡೆದ ಸಿಬಿಎಸ್‌ಇ ವಲಯ ಮಟ್ಟದ ಈಜು ಚಾಂಪಿಯನ್‌ಶಿಪ್ 2026 ರಲ್ಲಿ ಬೆಳಗಾವಿಯ ಈಜುಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. “ಸ್ವಿಮ್ಮರ್ಸ್ ಕ್ಲಬ್ ಬೆಳಗಾವಿ” ಮತ್ತು “ಅಕ್ವೇರಿಯಸ್ ಸ್ವಿಮ್ ಕ್ಲಬ್ ಬೆಳಗಾವಿ”ಯನ್ನು ಪ್ರತಿನಿಧಿಸಿದ ನಾಲ್ವರು ಯುವ ಈಜುಪಟುಗಳು 2 ಚಿನ್ನ, 6 ಬೆಳ್ಳಿ ಹಾಗೂ 4 ಕಾಂಸ್ಯ ಸೇರಿ ಒಟ್ಟು 12 ಪದಕಗಳನ್ನು ಗೆದ್ದು ನಗರಕ್ಕೆ ಕೀರ್ತಿ ತಂದಿದ್ದಾರೆ.

ಈ ಪೈಕಿ ಆರೋಹಿ, ನಿಧಿ ಹಾಗೂ ತನ್ವಿ ಅವರು ಮುಂಬರುವ ಸಿಬಿಎಸ್‌ಇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ 2026 ಕ್ಕೆ ಆಯ್ಕೆಯಾಗಿದ್ದಾರೆ.


ಪದಕ ವಿಜೇತರ ವಿವರ:

  • ಆರೋಹಿ ಚಿತ್ರಾಗಾರ್ (ಜೈನ್ ಹೆರಿಟೇಜ್ ಶಾಲೆ):
    • 100 ಮೀ. ಬಟರ್‌ಫ್ಲೈ – ಚಿನ್ನ
    • 200 ಮೀ. ಬಟರ್‌ಫ್ಲೈ – ಬೆಳ್ಳಿ
    • 50 ಮೀ. ಬಟರ್‌ಫ್ಲೈ – ಬೆಳ್ಳಿ
    • 200 ಮೀ. ಇಂಡಿವಿಜುಯಲ್ ಮೆಡ್ಲೆ – ಬೆಳ್ಳಿ
  • ನಿಧಿ ಕುಲಕರ್ಣಿ (ಕೆಎಲ್‌ಎಸ್ ಪಬ್ಲಿಕ್ ಶಾಲೆ):
    • 200 ಮೀ. ಬಟರ್‌ಫ್ಲೈ – ಚಿನ್ನ
    • 50 ಮೀ. ಬ್ಯಾಕ್‌ಸ್ಟ್ರೋಕ್ – ಬೆಳ್ಳಿ
    • 100 ಮೀ. ಬ್ಯಾಕ್‌ಸ್ಟ್ರೋಕ್ – ಕಂಚು
    • 100 ಮೀ. ಬಟರ್‌ಫ್ಲೈ – ಕಾಂಸ್ಯ
  • ತನ್ವಿ ಪೈ (ಕೆಎಲ್‌ಇ ಇಂಟರ್‌ನ್ಯಾಷನಲ್ ಶಾಲೆ):
    • 50 ಮೀ. ಬ್ರೆಸ್ಟ್‌ಸ್ಟ್ರೋಕ್ – ಬೆಳ್ಳಿ
    • 200 ಮೀ. ಬ್ರೆಸ್ಟ್‌ಸ್ಟ್ರೋಕ್ – ಬೆಳ್ಳಿ
    • 100 ಮೀ. ಬ್ರೆಸ್ಟ್‌ಸ್ಟ್ರೋಕ್ – ಕಂಚು
  • ವೇದಾಂತ್ ಮಿಸಾಳೆ (ಜ್ಯೋತಿ ಸೆಂಟ್ರಲ್ ಶಾಲೆ):
    • 100 ಮೀ. ಬಟರ್‌ಫ್ಲೈ – ಕಂಚು

ತರಬೇತಿ ಮತ್ತು ಮಾರ್ಗದರ್ಶನ:

ಈ ಎಲ್ಲಾ ಸಾಧಕ ಈಜುಪಟುಗಳು ಬೆಳಗಾವಿಯ ಸುವರ್ಣ ಜೆಎನ್‌ಎಮ್‌ಸಿ ಒಲಿಂಪಿಕ್ ಗಾತ್ರದ ಈಜು ಕೊಳದಲ್ಲಿ ತರಬೇತುದಾರರಾದ ಉಮೇಶ್ ಕಳಗಟಗಿ, ಅಕ್ಷಯ್ ಶೇರೆಗಾರ್, ಅಜಿಂಕ್ಯ ಮೆಂಡ್ಕೆ, ನಿತಿಷ್ ಕುಡುಚಕರ್ ಹಾಗೂ ಗೋವರ್ಧನ್ ಕಾಕತ್ಕರ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.

Home add -Advt

ಈ ಕ್ರೀಡಾಪಟುಗಳ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಜಯಭಾರತ್ ಫೌಂಡೇಶನ್ ಅಧ್ಯಕ್ಷ ಜಯಂತ್ ಹುಂಬರವಾಡಿ, ರೋ. ಅವಿನಾಶ್ ಪೋತದಾರ್, ಮಣೇಕ್ ಕಪಾಡಿಯಾ, ಲತಾ ಕಿತ್ತೂರ್, ಸುಧೀರ್ ಕುಸಾನೆ, ಪ್ರಸಾದ್ ತೆಂಡೂಲ್ಕರ್ ಹಾಗೂ ಹಲವು ಗಣ್ಯರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button