*ಜಾನಕಿ ಗೀತೆಗಳ ಗಾಯನದಲ್ಲಿ ಮಿಂದೆದ್ದ ಸಂಗೀತ ಸಂಜೆ* *‘ಸ್ಪಂದನಾ ಮೆಲೋಡೀಸ್’ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಗೀತಾಸಕ್ತರ ಮನಸೂರೆಗೊಂಡ ಗಾಯಕರು*

ಜಾನಕಿ ಗೀತೆಗಳ ಗಾಯನದಲ್ಲಿ ಮಿಂದೆದ್ದ ಸಂಗೀತ ಸಂಜೆ
‘ಸ್ಪಂದನಾ ಮೆಲೋಡೀಸ್’ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂಗೀತಾಸಕ್ತರ ಮನಸೂರೆಗೊಂಡ ಗಾಯಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ‘ಸ್ಪಂದನಾ ಮೆಲೋಡೀಸ್’ ವತಿಯಿಂದ ಆಯೋಜಿಸಿದ್ದ ‘ಸ್ವರ ಶ್ರದ್ಧಾಂಜಲಿ’ ಸಂಗೀತ ಕಾರ್ಯಕ್ರಮ ಸಂಗೀತಾಸಕ್ತರಿಗೆ ಅವಿಸ್ಮರಣೀಯ ಸಂಜೆ ಎನಿಸಿತು.
ರಾಣಿ ಚನ್ನಮ್ಮ ನಗರದ ಆರ್ಕಿಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ರಂಗಸೃಷ್ಟಿ ಸಹಯೋಗದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಾನಕಿ ಅವರ ಜನಪ್ರಿಯ ಗೀತೆಗಳಿಗೆ ಕಲಾವಿದರು ಧ್ವನಿಯಾಗುವ ಮೂಲಕ ಗಾನಯಾನಕ್ಕೆ ಜೀವ ತುಂಬಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ಜಾನಕಿ ಅವರ ಸುಮಧುರ ಗೀತೆಗಳಲ್ಲಿ ತಲ್ಲೀನರಾದರು.
ಬೆಳ್ಳಿ ಚುಕ್ಕಿ ಸಂಘಟನೆಯ ಸಂಸ್ಥಾಪಕಿ ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷರಾದ ಎಂ.ಕೆ. ಹೆಗಡೆ ಮತ್ತು ಶೈಲಜಾ ಭಿಂಗೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಸ್ಪಂದನಾ ಮೆಲೋಡೀಸ್ ಸಂಸ್ಥಾಪಕರೂ ಆಗಿರುವ ರಂಗಸೃಷ್ಟಿಯ ಕೋಶಾಧಿಕಾರಿ ಶಾಂತಾ ಆಚಾರ್ಯ, ಖ್ಯಾತ ಸಂಗೀತ ಶಿಕ್ಷಕ ಎಂ.ಜಿ. ರಾವ್, ರಂಗ ಕಲಾವಿದ ರವಿ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೂರ್ಣಾ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಹಿರಿಯ ಸಾಹಿತಿ ಹಾಗೂ ರಂಗನಿರ್ದೇಶಕ ಶಿರೀಶ್ ಜೋಶಿ ಸ್ವಾಗತಿಸಿ, ಎಸ್. ಜಾನಕಿ ಅವರ ಸಂಗೀತ ಪಯಣ ಮತ್ತು ಜೀವನದ ಪ್ರಮುಖ ಸಂಗತಿಗಳನ್ನು ಪರಿಚಯಿಸುತ್ತಾ ಮನೋಜ್ಞವಾಗಿ ಕಾರ್ಯಕ್ರಮ ನಿರೂಪಿಸಿದರು. ಉಷಾ ಬಾಳಿಗಾ ಅವರು ‘ಸ್ಪಂದನಾ ಮೆಲೋಡೀಸ್’ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರ ಪರಿಚಯ ಮಾಡಿಕೊಟ್ಟರು.
ದೀಪಾ ಪದಕಿ ಅವರು ‘ಪೂಜಿಸಲೆಂದೆ ಹೂಗಳ ತಂದೆ’ ಹಾಡಿನ ಮೂಲಕ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸುಕಲ್ಪ ಮಠಪತಿ ಮತ್ತು ಶೃತಿ ಕಾಮತ್ ‘ಜೀವ ವೀಣೆ’, ಶಾಂತಾ ಆಚಾರ್ಯ ಮತ್ತು ಮಹೇಶ ಕುಲಕರ್ಣಿ ‘ಒಂದೇ ಒಂದು ಆಸೆಯು’ ಹಾಗೂ ‘ಮಾತೊಂದು ಹೇಳುವೆ’, ಭುಜಂಗ ಪಾಟೀಲ ಮತ್ತು ಕವಿತಾ ಜಾಧವ ‘ದಿಲ್ ಮೇ ಹೋ ತುಮ್’ ಹಾಗೂ ‘ಯಾರ್ ಬಿನಾ’, ಶೃತಿ ಕಾಮತ್ ‘ಭಾನಲ್ಲೂ ನೀನೆ ಭುವಿಯಲ್ಲೂ ನೀನೆ’, ಭುಜಂಗ ಪಾಟೀಲ ಮತ್ತು ದೀಪಾ ಪದಕಿ ‘ಈ ಸಂಭಾಷಣೆ’, ಸಾವಿತ್ರಮ್ಮ ‘ದೇವರ ಆಟ ಬಲ್ಲವರಾರು’, ಮಹೇಶ ಕುಲಕರ್ಣಿ ಮತ್ತು ಶೃತಿ ಕಾಮತ್ ‘ನೀನೆಲ್ಲೋ ನಾನಲ್ಲೇ’, ಮಹೇಶ ಕುಲಕರ್ಣಿ ಮತ್ತು ದೀಪಾ ಪದಕಿ ‘ನಗುವಾ ನಯನ’ ಸೇರಿದಂತೆ ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ವಿಶೇಷವೆಂದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮರಾಠಿ ಕಲಾವಿದರು ಕನ್ನಡದ ಗೀತೆಗಳನ್ನು ಅತ್ಯಂತ ಸುಂದರವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಾಷೆಯ ಗಡಿಯನ್ನು ಮೀರಿ ಸಂಗೀತ ಎಲ್ಲರನ್ನೂ ಒಂದಾಗಿಸಬಲ್ಲದು ಎಂಬುದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.
ಪ್ರೇಕ್ಷಕರು ಕೂಡ ಕಲಾವಿದರೊಂದಿಗೆ ಹಾಡಿನಲ್ಲಿ ಧ್ವನಿಗೂಡಿಸಿದ ಜಾಮಿಂಗ್ ಕಾರ್ಯಕ್ರಮ ಸಂಗೀತ ಸಂಜೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಜಾನಕಿ ಅವರ ಹಾಡುಗಳೊಂದಿಗೆ ಪ್ರೇಕ್ಷಕರು ಕೂಡ ಬೆರೆತುಹೋದ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಪ್ರಭುನಗರದ ಬಾಲಕಲಾವಿದೆ ಸಾವಿತ್ರಮ್ಮ ಹಾಡಿದ ‘ದೇವರ ಆಟ ಬಲ್ಲವರಾರು’ ಗೀತೆ ವಿಶೇಷ ಗಮನ ಸೆಳೆಯಿತು. ಬಾಲಕಲಾವಿದೆಯ ಗಾಯನಕ್ಕೆ ಪ್ರೇಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಯಿತು. ಶುಭಾ ಹೆಗಡೆ ಅವರು ಸಾವಿತ್ರಮ್ಮ ಅವರ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಅಂತ್ಯದಲ್ಲಿ ಶಾಂತಾ ಆಚಾರ್ಯ ವಂದಿಸಿದರು.
ಎಸ್. ಜಾನಕಿ ಅವರ ಅಮರ ಗೀತೆಗಳನ್ನು ಮತ್ತೆ ನೆನಪಿಸುವುದರ ಜೊತೆಗೆ, ವಿವಿಧ ಭಾಷೆಗಳ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಂಗೀತದ ಮೂಲಕ ಭಾವೈಕ್ಯತೆ ಸಾರಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮ ಸಂಗೀತಾಸಕ್ತರ ಮನದಲ್ಲಿ ದೀರ್ಘಕಾಲ ಉಳಿಯುವಂತಾಯಿತು.
जानकी यांच्या गीतांनी रंगली अविस्मरणीय संगीतसंध्या
‘स्पंदना मेलोडीज’च्या स्वरश्रद्धांजली कार्यक्रमात संगीतप्रेमी मंत्रमुग्ध
बेळगाव : नुकतेच निधन झालेल्या प्रसिद्ध पार्श्वगायिका एस. जानकी यांच्या स्मृतिप्रीत्यर्थ ‘स्पंदना मेलोडीज’तर्फे आयोजित करण्यात आलेला ‘स्वर श्रद्धांजली’ हा संगीत कार्यक्रम संगीतप्रेमींसाठी अविस्मरणीय ठरला.
राणी चन्नम्मा नगर येथील ऑर्किड्स अपार्टमेंटमध्ये ‘रंगसृष्टी’च्या सहकार्याने गुरुवारी सायंकाळी आयोजित करण्यात आलेल्या या कार्यक्रमात कलाकारांनी एस. जानकी यांच्या लोकप्रिय गीतांना आपल्या सुरेल आवाजातून उजाळा दिला. सुमारे अडीच तास चाललेल्या या कार्यक्रमाला मोठ्या संख्येने उपस्थित असलेल्या रसिकांनी जानकी यांच्या सदाबहार गीतांचा मनमुराद आनंद घेतला.
‘बेल्ली चुक्की’ संघटनेच्या संस्थापक राजेश्वरी हिरेमठ यांच्या हस्ते कार्यक्रमाचे उद्घाटन झाले. ‘रंगसृष्टी’चे अध्यक्ष रमेश जंगल, उपाध्यक्ष एम.के. हेगडे आणि शैलजा भिंगे, सचिव शरणगौडा पाटील, ‘स्पंदना मेलोडीज’च्या संस्थापक तसेच ‘रंगसृष्टी’च्या कोषाध्यक्षा शांता आचार्य, प्रसिद्ध संगीत शिक्षक एम.जी. राव, रंगकलावंत रवी आचार्य यांच्यासह अनेक मान्यवर उपस्थित होते.
पूर्णा हेगडे यांच्या प्रार्थनेने कार्यक्रमाची सुरुवात झाली. ज्येष्ठ साहित्यिक आणि रंगदिग्दर्शक शिरीष जोशी यांनी स्वागत करून एस. जानकी यांच्या संगीतप्रवासातील महत्त्वाच्या टप्प्यांची माहिती देत कार्यक्रमाचे सुरेख सूत्रसंचालन केले. उषा बाळिगा यांनी ‘स्पंदना मेलोडीज’ तसेच कार्यक्रमात सहभागी कलाकारांचा परिचय करून दिला.
दीपा पडकी यांनी ‘पूजिसलेंदे हूगळ तंदे’ या गीताने गायन कार्यक्रमाची सुरुवात केली. त्यानंतर सुकल्प मठपती आणि श्रुती कामत यांनी ‘जीव वीणे’, शांता आचार्य आणि महेश कुलकर्णी यांनी ‘ओंदे ओंदु आसेयु’ आणि ‘मातोंदु हेळुवे’, भुजंग पाटील आणि कविता जाधव यांनी ‘दिल में हो तुम’ आणि ‘यार बिना’, श्रुती कामत यांनी ‘भानल्लू नीने भुवियल्लू नीने’, भुजंग पाटील आणि दीपा पडकी यांनी ‘ई संभाषणे’, सावित्रीअम्मा यांनी ‘देवर आट बल्लवरारू’, महेश कुलकर्णी आणि श्रुती कामत यांनी ‘नीनेल्लो नानल्ले’, तर महेश कुलकर्णी आणि दीपा पडकी यांनी ‘नगुवा नयन’ यासह जानकी यांच्या लोकप्रिय गीतांचे सुरेल सादरीकरण करून रसिकांची मने जिंकली.
या कार्यक्रमाचे विशेष आकर्षण म्हणजे सहभागी झालेल्या मराठी कलाकारांनी कन्नड गीते अत्यंत सुंदरपणे सादर करून रसिकांची वाहवा मिळवली. भाषेच्या सीमा ओलांडून संगीत सर्वांना एकत्र आणू शकते, याचा प्रत्यय या कार्यक्रमातून आला.
कार्यक्रमादरम्यान रसिकांनीही कलाकारांसोबत गाण्यांमध्ये सहभागी होत केलेल्या जॅमिंग सत्राने संगीतसंध्येचा उत्साह अधिकच वाढवला. जानकी यांच्या अमर गीतांसोबत रसिकही स्वरांमध्ये रमून गेले आणि वातावरणाला विशेष रंगत आली.
प्रभुनगर येथील बालकलावंत सावित्रीअम्मा हिने सादर केलेल्या ‘देवर आट बल्लवरारू’ या गीताला रसिकांनी उत्स्फूर्त दाद दिली. तिच्या गायनाला उपस्थितांकडून जोरदार टाळ्यांचा कडकडाट झाला. शुभा हेगडे यांनी सावित्रीअम्माचा परिचय करून दिला.
कार्यक्रमाच्या शेवटी शांता आचार्य यांनी आभार मानले.
एस. जानकी यांच्या अमर गीतांना पुन्हा उजाळा देतानाच विविध भाषांतील कलाकारांना एकाच व्यासपीठावर आणून संगीताच्या माध्यमातून भावनिक ऐक्याचा संदेश देणारा ‘स्वर श्रद्धांजली’ कार्यक्रम संगीतप्रेमींच्या स्मरणात दीर्घकाळ राहील, अशी प्रतिक्रिया रसिकांनी व्यक्त केली.



