Belagavi NewsBelgaum NewsKannada NewsKarnataka NewsLatestPolitics
*ದಿ. ಡಿ ವಾಯ್ ಪಾಟೀಲ ಮನೆಗೆ ಭೇಟಿ ನೀಡಿದ ಪದ್ಮಶ್ರೀ ಡಾ. ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತಿಚೀಗೆ ಕೋಲ್ಲಾಪುರದಲ್ಲಿ ನಿಧನರಾದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಪಶ್ಚಿಮ ಬಂಗಾಳ, ಬಿಹಾರ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಡಿ ವಾಯ್ ಪಾಟೀಲ ಅವರ ಮನೆಗೆ ರವಿವಾರ ಸಂಜೆ ಬೇಟಿ ನೀಡಿದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಡಿ ವಾಯ್ ಪಾಟೀಲ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಡಿ ವಾಯ್ ಪಾಟೀಲ ಭಾವಚಿತ್ರಕ್ಕೆ ಪುಸ್ಪ ಅರ್ಪಣೆಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ಈ ವೇಳೆ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ, ನ್ಯಾಯವಾದಿ ರವಿರಾಜ ಪಾಟೀಲ, ಡಿ ವಾಯ್ ಪಾಟೀಲ ಅವರ ಪುತ್ರ, ಮಹಾರಾಷ್ಟ್ರ ಮಾಜಿ ಮಂತ್ರಿ ಕೋಲ್ಹಾಪುರ ಶಾಸಕ ಸತೇಜ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.




