Karnataka NewsLatestPolitics

*ಯಾರ ಮೇಲೆ ಕೇಸ್‌ಗಳಿಲ್ಲ? ವಿಪಕ್ಷಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ? ಎಷ್ಟು ಜನ ಜಾಮೀನು ಪಡೆದು ಸಚಿವರಾಗಿಲ್ಲ? ಎಂದು ಪ್ರಶ್ನಿಸುವ ಮೂಲಕ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ ಎಂದು ಪ್ರಶ್ನಿಸಿದರು.

ನಾಗೇಂದ್ರ ಅವರು ಕರ್ನಾಟಕದಿಂದ ಹೊರಗೆ ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನೇ ಇದ್ದರೂ ಅದನ್ನು ಪರಿಶೀಲಿಸುತ್ತೇವೆ. ವಿಪಕ್ಷಗಳಿಗೆ ಚರ್ಚಿಸಲು ವಿಷಯಗಳು ಬೇಕು, ಹಾಗಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button