Kannada NewsKarnataka NewsLatest
*ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ಆದೇಶ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕಕ್ಕೆ ಮತ್ತೆ ಕಾವೇರಿ ನದಿ ನೀರು ವಿಚಾರವಾಗಿ CWRC ಬಿಗ್ ಶಾಕ್ ನೀಡಿದೆ. ತಮಿಳುನಾಡಿಗೆ ಮತ್ತೆ ಪ್ರತಿದಿನ 12,000 ಕ್ಯೂಸೆಕ್ ನೀರಿನಂತೆ 15 ದಿನಗಳ ಕಾಲ ನೀರು ಬಿಡುವಂತೆ CWRC ಶಿಫಾರಸು ಮಾಡಿದೆ.
CWRC ಆದೇಶಕ್ಕೆ ರಾಜ್ಯದ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯದಲ್ಲಿ ಇನ್ನೂ ನೀರು ಭರ್ತಿಯಾಗಿಲ್ಲ, ಒಳಹರಿವು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿ ದಿನ 1 ಟಿಎಂಸಿಯಷ್ಟು ನೀರು ಬಿಡುವುದು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ CWRC ಈ ಆದೇಶ ಹೊರಡಿಸಿದ್ದು, ರಾಜ್ಯಕ್ಕೆ ಸಂಕಷ್ಟ ತಂದೊಡ್ಡಿದೆ.
CWRC ಆದೇಶದ ಬೆನ್ನಲ್ಲೇ ಮತ್ತೆ ಮಂಡ್ಯ, ಕಾವೇರಿ ಕೊಳ್ಳದ ರೈತರು, ಕನ್ನಡಪರ ಸಂಘಟನೆಗಳ ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆ ಇದೆ.




