Karnataka NewsLatestPolitics

*BREAKING: ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದಿನಿಂದ ಆರಂಭವಾಗಿದೆ. ಹಂಗಾಮಿ ಸ್ಪೀಕರ್ ಆಗಿ ಟಿ.ಬಿ.ಜಯಚಂದ್ರ ವಿಧಾನಸಭೆ ಕಲಾಪ ಆರಂಭಿಸಿದರೆ, ಡಾ.ಯತೀಂದ್ರ ಸಿದ್ದರಾಮಯ್ಯ, ಸಭಾನಾಯಕರಾಗಿ ವಿಧಾನಪರಿಷತ್ ಕಲಾಪ ಆರಂಭಿಸಿದರು.

ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆ ಕಲಾಪವನ್ನು ಆರಂಭಿಸಿದರು. ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, ಇಂದು ಮೊದಲು ಸಂತಾಪ ಸೂಚನಾ ಕಲಾಪವನ್ನು ನಡೆಸಿ, ನಾಳೆ ನೂತನ ಸಚಿವರ ಪರಿಚಯ ಮಾಡಿಕೊಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದರು.

Home add -Advt

ಈ ವೇಳೆ ವಿಪಕ್ಷಗಳ ಭಾವನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮತಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಿತು.

Related Articles

Back to top button