*ಬೆಳಗಾವಿ ಸಿಸಿಬಿ ಪೊಲೀಸ್‌ರಿಂದ ಅಫೀಮು ಸಾಗಿಸುತ್ತಿದ್ದ ಆರೋಪಿಯ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾರಾಟ ಮಾಡುಲು ಅಫೀಮ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿಡಿರುವ ಬೆಳಗಾವಿಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಪೀಕ್ ಅಹ್ಮದ ಹುಸೇನಸಾಬ ಸಿಕ್ಕಲಗಾರ (62) ಬಂದಿತ ಆರೋಪಿ. ಬೆಳಗಾವಿ ನಗರದ ಪೋರ್ಟ ರೋಡ್ ಓಲ್ಲ ಕೆಎಸ್‌ಆರ್‌ಟಿಸಿ ಡಿಪೋ, ಇಂದಿರಾ ಕ್ಯಾಂಟೀನ ಹತ್ತಿರ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ನೇತೃತ್ವದಲ್ಲಿ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದು, ದಾಳಿ ವೇಳೆ ಆರೋಪಿತನಿಂದ ಸುಮಾರು 44 ಸಾವಿರ ಮೌಲ್ಯದ 2 ಕೆಜಿ. 988 ಗ್ರಾಂ ಮೌಲ್ಯದ ಅಪೀಮ ಗಿಡ, ಗಸಗಸೆ ಕಾಯಿಯ ತುಂಡುಗಳು ಹಾಗೂ ಪಾವಡರ್‌ನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ರಾಜಸ್ಥಾನ ಮೂಲದ ಧೀರೂಭಾಯಿ ಎಂಬಾತನಿಂದ ಸದರಿ ಅಫೀಮನ್ನು ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇಬ್ಬರೂ ಆರೋಪಿಗಳ ವಿರುದ್ಧ ಮಾರ್ಕೆಟ ಪೋಲೀಸ್ ಠಾಣೆ ಪ್ರ ಸಂ.190/2026 ಕಲಂ.15(b), 8(c) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ದಾಳಿ ಕೈಗೊಂಡ ಸಿಸಿಬಿ ವಿಭಾಗದ ಪಿಐ, ಪಿಎಸ್‌ಐ, ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.

