Belagavi NewsBelgaum NewsCrimeKannada NewsKarnataka NewsNationalPolitics

*ಮೂವರು ಮನೆಗಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಮಕನಮರಡಿ ಪೋಲಿಸ್ ಠಾಣಾ ವ್ಯಾಪ್ತಿಯ ಕಾಟಾಬಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೋಲಿಸರು ಯಶಸ್ವಿಯಾಗಿದ್ದಾರೆ. 

ರಾಮಚಂದ್ರ ಫಕೀರಪ್ಪ ತಳವಾರ, ಸುರೇಶ ಲಕ್ಕಪ್ಪಾ ಪಾಟೀಲ, ಹಾಗೂ  ಯಲ್ಲಪ್ಪಾ ಸೋಮನಿಂಗ ದಂಡು ಬಂಧಿತ ಆರೋಪಿಗಳು.

Home add -Advt

ಕಾಟಾಬಳಿ ಗ್ರಾಮದ ಛಾಯಾ ಯಲ್ಲಪ್ಪಾ ದೇಶ್ನೂರ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮೇಲ್ಛಾವಣಿ ತೆಗೆದು ಮನೆಯಲ್ಲಿದ್ದ  ಬಂಗಾರದ ಚೈನ್, ಬ್ರಾಸಲೇಟ್ , ಕಿವಿಓಲೆ , ಹಾಗೂ ಬೆಳ್ಳಿಯ ಬ್ರಾಸಲೇಟ್ ಹೀಗೆ ಒಟ್ಟು 78,000 ರೂ ಮೌಲ್ಯದ ಆಭರಣಗಳುನ್ನು ಕಳ್ಳತನ ಆಗಿತ್ತು.

ಈ ಬಗ್ಗೆ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ವಿಷೇಶ ತಂಡವನ್ನು ರಚಿಸಲಾಗಿತ್ತು, ಬೆಳಗಾವಿಯ ಎಸ್ಪಿ ಅವರ ಮಾರ್ದಶನದಲ್ಲಿ ಯಮಕನಮರಡಿಯ ಪಿ.ಐ. ಜಾವೇದ್ ಮುಶಾಪೂರಿ ಅವರ ನೇತೃತ್ವದ ತಂಡವು ಕಾರ್ಯಚರಣೆಯನ್ನು ನಡೆಸಿ ಆರೋಪಿಗಳನ್ನು ಬಂದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.

Related Articles

Back to top button