Belagavi NewsBelgaum NewsCrimeKannada NewsKarnataka NewsNational
*ಬೆಳಗಾವಿಯಲ್ಲಿ ಘೋರ ದುರಂತ: ಪಂಚಮಿ ಹಬ್ಬದ ದಿನವೇ ಹಾವು ಕಚ್ಚಿ ಮಹಿಳೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಗರಪಂಚಮಿ ಹಬ್ಬದ ದಿನವೇ ಗದ್ದೆಯಲ್ಲಿ ಕಳೆ ತೆಗೆಯುತ್ತಿದ್ದ ರೈತ ಮಹಿಳೆಗೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಈ ಘಟನೆ ನಡೆದಿದೆ. 43 ವರ್ಷದ ಸತ್ಯವ್ವ ಶಿಂಗೆ ಎಂಬ ಮಹಿಳೆ ಮೇಲೆ ಪೊದೆಯಲ್ಲಿ ಅಡಗಿದ್ದ ಕೊಳಕುಮಂಡಲ ಹಾವು ಕಚ್ಚಿದೆ.
ಈ ಘಟನೆ ನಡೆದ ತಕ್ಷಣವೇ ಅವರನ್ನು ಚಿಕಿತ್ಸೆಗೆಂದು ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ವೈದ್ಯಕೀಯ ನೆರವು ಸಿಗುವ ಮೊದಲೇ ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಾಗರಪಂಚಮಿ ಹಬ್ಬದ ಹರ್ಷದಲ್ಲಿದ್ದ ಇಡೀ ಗ್ರಾಮ ಈ ಆಕಸ್ಮಿಕ ಅವಘಡದಿಂದಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದು ಶೋಕ ಸಾಗರದಲ್ಲಿ ಮುಳುಗಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




