Kannada NewsKarnataka NewsNational

*ಗುಡ್ ನ್ಯೂಸ್: 1 ರೂ. ಫ್ರೀಡಂ ಯೋಜನೆ ಜಾರಿಗೆ ತಂದ ಬಿಎಸ್ಎನ್ಎಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿ.ಎಸ್.ಎನ್.ಎಲ್, ಗ್ರಾಹಕರಿಗೆ ಮೊಬೈಲ್ ಮತ್ತು ಎಫ್.ಟಿ.ಎಚ್. ಸಂಪರ್ಕಗಳಲ್ಲಿ ರಿಯಾಯಿತಿ ದರದಲ್ಲಿ ವಿಶೇಷ ಆಕರ್ಷಕ ಯೋಜನೆಗಳನ್ನು ನೀಡಲಾಗುತ್ತಿದೆ.

ಬಿ.ಎಸ್.ಎನ್.ಎಲ್, ಹೊಸ ಮೊಬೈಲ್ ಗ್ರಾಹಕರಿಗೆ ರೂ.1 ಫ್ರೀಡಂ ಯೋಜನೆಯನ್ನು ಜಾರಿಗೆ ತಂದಿದ್ದು ಮೊದಲ ತಿಂಗಳು ಉಚಿತ ಮತ್ತು ಸೂಪರ್ ಪ್ಲಸ್ ಒಟಿಟಿ ಪ್ಲಾನ್-1111 ಜೊತೆಗೆ 200 ಎಂ.ಬಿ.ಪಿ.ಎಸ್. ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಗ್ರಾಮೀಣ ಗ್ರಾಹಕರಿಗೆ ಎಂಟ್ರಿ ಪ್ಲಾನ್ 259 ಜೊತೆಗೆ ಎಫ್.ಟಿ.ಎಚ್. ಪ್ಲಾನ್ ತಂದಿದೆ.

Home add -Advt

ಗ್ರಾಹಕರಿಗೆ ಹಾಗೂ ಆಪರೇಟರ್‌ಗಳಿಂದ ಪೋರ್ಟಇನ್ ಗ್ರಾಹಕರಿಗಾಗಿ 1 ರೂ ದರದಲ್ಲಿ ಫ್ರೀಡಮ್ ಪ್ಲಾನ್ ಅನ್ನು ಪರಿಚಯಿಸಿದ್ದು, ಈ ಯೋಜನೆಯು 24 ದಿನಗಳ ಮಾನ್ಯತೆಯನ್ನು ಹೊಂದಿದ್ದು ಪ್ರತಿದಿನ 1 ಜಿಬಿ ಡೇಟಾ ಮತ್ತು ಅನಲೀಮಿಟೆಡ್ ಕರೆಗಳ ಸೌಲಭ್ಯವನ್ನು ಒಳಗೊಂಡಿದೆ. 

ಈಗಾಗಲೆ ಲಭ್ಯವಿರುವ 51 ರೂ ಗಳ ಸಾಮಾನ್ಯ ಯೋಜನೆಗೆ (ಇದು 28 ದಿನಗಳವರೆಗೆ ಪ್ರತಿ ದಿನ 2 ಜಿಬಿ ಡೇಟಾವನ್ನು ನೀಡುತ್ತಿದೆ) ಹೆಚ್ಚುವರಿಯಾಗಿ ಪರಿಚಯಿಸಲಾದ ಯೋಜನೆಯಾಗಿದೆ.

ಆಸಕ್ತ ಗ್ರಾಹಕರು ಹತ್ತಿರದ ಬಿ.ಎಸ್.ಎನ್.ಎಲ್, ಗ್ರಾಹಕ ಸೇವಾ ಕೇಂದ್ರಗಳು/ಫ್ರಾಂಚೈಸಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬಿ.ಎಸ್.ಎನ್.ಎಲ್, ಪ್ರಧಾನ ವ್ಯವಸ್ಥಾಪಕ ವಿಕಾಸ್ ಜಯಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button