Kannada NewsKarnataka NewsLatest

*ಮಹಿಳಾ ಪೊಲೀಸ್ ಅಧಿಕಾರಿ ಅರೆಬೆತ್ತಲೆ ವಿಡಿಯೋ ಪ್ರಕರಣ: ಇಬ್ಬರ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿದ್ದ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅರೆಬೆತ್ತಲಾಗಿ ವಿಡಿಯೋ ಕಾಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೇ ಇಡೀ ಪೊಲೀಸ್ ಇಲಾಖೆಯನ್ನೇ ತಲೆ ತಗ್ಗಿಸುವಂತೆ ಮಾಡಿದ್ದ ಮಹಿಳಾ ಅಧಿಕಾರಿಯ ವಿಡಿಯೋ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ವಿಡಿಯೋನಲ್ಲಿರುವ ಪೊಲೀಸ್ ಅಧಿಕಾರಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Home add -Advt

ವಿಡಿಯೋ ವೈರಲ್ ಮಾಡಿರುವ ಇಬ್ಬರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.ರೌಡಿಶೀಟರ್ ಸಾಯಿಕುಮಾರ್ ಹಾಗೂ ಧರ್ಮ ಎಂಬುವವರ ವಿರುದ್ಧ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರೌಡಿಶೀಟರ್​ ಸಾಯಿಕುಮಾರ್ ವಿಡಿಯೋ ವೈರಲ್ ಮಾಡಿದ್ದಾನೆ. ಕೆಲ ವರ್ಷಗಳ ಹಿಂದೆ ರೌಡಿಶೀಟರ್​ ಧರ್ಮ ಜೊತೆ ಆತ್ಮೀಯವಾಗಿದ್ದೆ. ವಿಡಿಯೋ ಕಾಲ್​ನಲ್ಲಿ ಧರ್ಮ ಜೊತೆ ಮಾತಾಡಿದ್ದಾಗ ಆತನೇ ರೆಕಾರ್ಡ್ ಮಾಡಿಕೊಂಡಿದ್ದಾನೆ. ಬಳಿಕ ವಿಡಿಯೋವನ್ನು ರೌಡಿಶೀಟರ್ ಸಾಯಿಕುಮಾರ್​​ಗೆ ಕೊಟ್ಟು ವೈರಲ್‌ ಮಾಡಿಸಿದ್ದಾನೆ. ಹೀಗಾಗಿ ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮಹಿಳಾ ಅಧಿಕಾರಿ ಉಲ್ಲೇಖಸಿದ್ದಾರೆ.

ನಾನು ಮೆಟ್ರೋ ನಿಲ್ದಾಣದ ಸೆಕ್ಯೂರಿಟಿ ಉಸ್ತುವಾರಿ ಅಧಿಕಾರಿಯಾಗಿದ್ದೇನೆ. ನನಗೆ ಮದುವೆಯಾಗಿ ಮಕ್ಕಳಿದ್ದಾರೆ, ಸಮಾಜದಲ್ಲಿ ಒಳ್ಳೆಯ ಹೆಸರಿದೆ. ವಿಡಿಯೋ ವೈರಲ್ ಮಾಡಿ ನನ್ನ ಗೌರವಕ್ಕೆ ಧಕ್ಕೆ ತರಲಾಗಿದೆ. ರೌಡಿಶೀಟರ್​ಗಳಾದ ಸಾಯಿಕುಮಾರ್,​​ ಧರ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಹಿಳಾ ಅಧಿಕಾರಿ ನೀಡಿರುವ ಈ ದೂರಿನ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಎನ್​​ಸಿಆರ್ ದಾಖಲಿಸಿಕೊಂಡಿದ್ದಾರೆ.


Related Articles

Back to top button