Belagavi NewsBelgaum NewsKannada NewsKarnataka NewsLatest

*ಹಿಂಡಲಗಾ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು: ಹಣಕ್ಕಾಗಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಬೆತ್ತಲೆ ವಿಡಿಯೋ ಕಾಲ್?*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹಿಂಡಲಗಾ ಜೈಲಿನ ಹೊಸ ಕರ್ಮಕಾಂಡ ಬಯಲಾಗಿದೆ. ಜೈಲಿನಲ್ಲಿ ಅಧಿಕಾರಿಗಳೇ ಹಣಕ್ಕಾಗಿ ವಿವಿಧ ವಾಮಮಾರ್ಗಗಳ ಮೂಲಕ ಕೈದಿಗಳ ಜೀವ ಹಿಂಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಜೈಲಿನ ಅಧಿಕಾರಿಗಳೇ ಹಣಕ್ಕಾಗಿ ಕೈದಿಗಳಿಗೆ ಮೊಬೈಲ್, ನಿಷೇಧಿತ ವಸ್ತುಗಳನ್ನು ತಂದು ಮಾರಾಟ ಮಾಡುತ್ತಾರೆ ಎಂದು ಯುವಕನೊಬ್ಬ ವಿಡಿಯೋ ಮೊಲಕ ಆರೋಪಿಸಿದ್ದಾನೆ.

ತುಮಕೂರು ಮೂಲದ ಸಾಯಿಕುಮಾರ್ ಎಂಬ ಯುವಕ 2024ರಲ್ಲಿ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿದ್ದ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದ ಅವಾಂತರಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಹಿಂದಲಗಾ ಜೈಲಿನಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೇ ನಡೆಯುತ್ತದೆ ಎಂದು ಯುವಕ ಆರೋಪಿಸಿದ್ದಾನೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ನಮ್ಮ ಮೇಲೆ ಸುಳ್ಳು ಕೇಸ್ ಹಾಕುತ್ತಾರೆ. ಅಧಿಕಾರಿಗಳೇ ಜೈಲಿನಲ್ಲಿ ಮೊಬೈಲ್, ಗಾಂಜಾ, ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಾರೆ ಎಂದಿದ್ದಾನೆ.

ಅಲ್ಲದೇ ಹಣಕ್ಕಾಗಿ ಕೈದಿಗಳ ಜೊತೆ ಬೆತ್ತಲೆ ವಿಡಿಯೋ ಕಾಲ್ ಮಾಡುವ ಮಹಿಳಾ ಪೊಲೀಸ್ ಅಧಿಕಾರಿಯೊರ್ವಳು ಕಳೆದ ಕೆಲ ತಿಂಗಳ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನ ಭದ್ರತಾ ಅಧಿಕಾರಿಯಾಗಿದ್ದಳು ಎಂದಿದ್ದಾನೆ. ಈ ಮಹಿಳೆ ಕೈದಿಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೇ ನಿಷೇಧಿತ ವಸ್ತುಗಳನ್ನು ಕಳ್ಳ ಮಾರ್ಗದ ಮೂಲಕ ಜೈಲಿನೊಳಗೆ ತಲುಪಿಸುವ ಕೆಲಸ ಮಾಡುತ್ತಿದ್ದಳು ಎಂದಿದ್ದಾನೆ.

ಸಹ ಅಧಿಕಾರಿ ಜೊತೆ ಕಿರಿಕ್ ಆಗಿದ್ದರಿಂದ ಈ ಮಹಿಳಾ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರಕರಣ ಮುಚ್ಚಿ ಹಾಕಲಾಗಿತ್ತು ಎಂದು ಆರೋಪಿಸಿದ್ದಾನೆ.

ಇದರ ಅಸಲಿ ಸತ್ಯ ಇನ್ನಷ್ಟ ಗೊತ್ತಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button