
ಬೆಳಗಾವಿಯ ಪ್ರಭಾವತಿ ಹಾಲೆನ್ನವರ್, ಯಲ್ಲಾಪುರದ ರಾಮಚಂದ್ರ ನಾಯ್ಕ ಸೇರಿ 31 ಶಿಕ್ಷಕರು ಆಯ್ಕೆ
ಪ್ರಗತಿವಾಹಿನಿ ಸುದ್ದಿ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ರಾಅಜ್ಯ ಸರ್ಕಾರ ಕೊಡಮಾಡುವ 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ.
ಈ ಬಾರಿ ಒಟ್ಟು 31 ಶಿಕ್ಷಕರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಹಾಗೂ ಪ್ರೌಢ ಶಾಲಾ ವಿಭಾಗದಿಂದ 11 ಶಿಕ್ಷಕರು, ಒಬ್ಬರು ವಿಶೇಷ ಶಿಕ್ಷಕರೂ ಸೇರಿದಂತೆ ಒಟ್ಟು 31 ಶಿಕ್ಷಕರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಕ್ಷರ ಮಾತೆ “ಸಾವಿತ್ರಿಬಾಯಿ ಫುಲೆ” ಅವರ ಸ್ಮರಣಾರ್ಥವಾಗಿ, ಅವರ ಹೆಸರಿನಲ್ಲಿ ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಈ ಪ್ರಶಸ್ತಿಯು ತಲಾ 25,000 ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ. ಈ ಪ್ರಶಸ್ತಿಗಾಗಿ ತಗುಲುವ ಒಟ್ಟು 7,75,000 ರೂ. ವೆಚ್ಚವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲು ಸರ್ಕಾರ ಅನುಮತಿ ನೀಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವಿದ್ಯಾ ಹೆಚ್.ವೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆ ಆದ ಶಿಕ್ಷಕರು: ಪ್ರಾಥಮಿಕ ಶಾಲಾ ವಿಭಾಗ:
ಸಿ. ಉಮಾ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಂಪತಿಮ್ಮನಹಳ್ಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಬಸಪ್ಪ ಪರಪ್ಪ ಪಾಟೀಲ – ಕೆ.ಹೆಚ್.ಪಿ.ಎಸ್. ಹಲ್ಲೂರು ಕ್ರಾಸ್, ಮೂಡಲಗಿ ಶೈಕ್ಷಣಿಕ ವಲಯ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ.
ಅಶೋಕ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಸಕುತ್ತೂರು, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ.
ಸುರೇಶ ಕೆ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುಂಡೇರದೊಡ್ಡಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ.
ಹಣಮಂತ ಕಲ್ಲಪ್ಪ ಕಾತರಕಿ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಗಲಗುತ್ತಿ, ವಿಜಯಪುರ ಗ್ರಾಮಾಂತರ ತಾಲ್ಲೂಕು, ವಿಜಯಪುರ ಜಿಲ್ಲೆ.
ಉಷಾ ವಿ. ನಾಯಕ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನಾವರ ನಂ.1, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ಮಸ್ತಾನ್ ವಲಿ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುಟ್ಟಹಳ್ಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
ಪ್ರಭಾವತಿ ಬಾಳಪ್ಪಾ ಹಾಲೆನ್ನವರ – ಮರಾಠಿ ಹಿರಿಯ ಪ್ರಾಥಮಿಕ ಶಾಲೆ, ಜಾಫರವಾಡಿ, ಕಡೋಲಿ, ಬೆಳಗಾವಿ ಗ್ರಾಮಾಂತರ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಸರೋಜಮ್ಮ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ.
ನಿಂಗಪ್ಪ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಜಬಬಲಾದ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ.
ರತ್ನಮ್ಮ ಎನ್. ಎಂ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಬತ್ತಹಳ್ಳಿ, ಬೆಂಗಳೂರು ದಕ್ಷಿಣ ವಲಯ-3, ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ.
ನೇಮಣ್ಣ ಬಮ್ಮಣ್ಣ ಜಮಖಂಡಿ – ಶ್ರೀ ಜಿನಸೇನಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ತೇರದಾಳ, ಜಮಖಂಡಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ರಾಮಚಂದ್ರ ಈ. ನಾಯ್ಕ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿಗಲ್ಲಿ, ಯಲ್ಲಾಪುರ ತಾಲ್ಲೂಕು, ಶಿರಸಿ ಶೈಕ್ಷಣಿಕ ಜಿಲ್ಲೆ.
ಮಾಲಿನಿ ಎಂ. – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುದಿಗೌಡನಹಟ್ಟಿ, ಕೊರಟಗೆರೆ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.
ಕುಮಾರನಾಯ್ಕ ಬಿ. ಡಿ. – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಾಗಡಿ ತಾಂಡ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಕೃಷ್ಣಮೂರ್ತಿ ಕೆ. ಎಸ್. – ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೃಹಲಕ್ಷ್ಮೀ ಬಡಾವಣೆ, ಬೆಂಗಳೂರು ಉತ್ತರ ವಲಯ-1, ಬೆಂಗಳೂರು ಉತ್ತರ ಜಿಲ್ಲೆ.
ಮಲ್ಲಿಕಾರ್ಜುನ ಬಡಿಗೇರ – ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸದಾಶಿವಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ.
ಪ್ರೇಮಕುಮಾರ್ ವಿ. ಎಸ್ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಗ್ಗರ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ.
ದುರಗಪ್ಪ ಹೆಚ್. – ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಕೊಂಚಿಗೇರಿ, ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ.
ಮೈಲಾರಪ್ಪ ಬೂದಿಹಾಳ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನವಾಳ, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ.
ಪ್ರೌಢ ಶಾಲಾ ವಿಭಾಗ:
ಬಿರಾದಾರ ಸಿದ್ದಪ್ಪ ವೀರಭದ್ರಪ್ಪ – ಸರ್ಕಾರಿ ಪ್ರೌಢ ಶಾಲೆ, ಚಿಬ್ಬಲಗೇರಿ, ಹಳಿಯಾಳ ತಾಲ್ಲೂಕು, ಶಿರಸಿ ಶೈಕ್ಷಣಿಕ ಜಿಲ್ಲೆ.
ಶೈನಾಕುಮಾರಿ ಎಂ. – ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢ ಶಾಲಾ ವಿಭಾಗ), ಜೀವನ್ ಭೀಮಾನಗರ, ಬೆಂಗಳೂರು ದಕ್ಷಿಣ ವಲಯ-4, ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ.
ಕುಬೇರನಾಯ್ಕ ಬಿ. – ಸರ್ಕಾರಿ ಪ್ರೌಢ ಶಾಲೆ, ತಮ್ಮಡಿಹಳ್ಳಿ, ಶಿವಮೊಗ್ಗ ತಾಲ್ಲೂಕು ಮತ್ತು ಜಿಲ್ಲೆ.
ನೀಲಕಂಠ ಗಾವಂಕರ್ – ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ದೇವನಹಳ್ಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ವಿ. ವೆಂಕಟೇಶ – ಸರ್ಕಾರಿ ಪ್ರೌಢಶಾಲೆ, ಗೂಳೂರು, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
ಮಮತಾ ನಾಯ್ಕ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಗನಾಶಿನಿ, ಉನ್ನತೀಕರಿಸಿದ ಆರ್.ಎಂ.ಎಸ್.ಎ ಶಾಲೆ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ರೋಶನ್ ಅಲೆಕ್ಸಾಂಡರ್ ಪಿಂಟೊ – ಕಾರ್ಮಲ್ ಹೈಸ್ಕೂಲ್, ಮೋದನಕಾವು, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಜಯಶೀಲ – ಸರ್ಕಾರಿ ಆದರ್ಶ ವಿದ್ಯಾಲಯ, ಮೈಸೂರು ದಕ್ಷಿಣ ತಾಲ್ಲೂಕು ಮತ್ತು ಮೈಸೂರು ಜಿಲ್ಲೆ.
ಮಥಾಯಿ ಟಿ. – ಸರ್ಕಾರಿ ಪ್ರೌಢ ಶಾಲೆ, ಮುತ್ತಿನಕೊಪ್ಪ, ನರಸಿಂಹರಾಜಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಜಯಪ್ಪ ಕೆ. ಟಿ. – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉನ್ನತೀಕರಣ ಶಾಲೆ), ನಿಟ್ಟುವಳ್ಳಿ, ಆರ್.ಎಮ್.ಎಸ್.ಎ. ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆ.
ಆನಂದ ಮಾದೇವ ಝಂಡೆ ವಿಶೇಷ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ, ಟಕ್ಕಲಕಿ, ವಿಜಯಪುರ ಜಿಲ್ಲೆ.




