Kannada NewsKarnataka NewsPolitics

*ರಾಜೀನಾಮೆ ರಹಸ್ಯ ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಅಂದ್ರು ಆದರೂ ತಾವು ರಾಜೀನಾಮೆ ಕೊಟ್ಟಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Home add -Advt

ಚಿಕ್ಕಮಗಳೂರಿನ ಕಡೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ,, ನಾನು ಯಾವುದೋ ದೇವಸ್ಥಾನಕ್ಕೆ ಹೋದಾಗ ಮೋದಿ…ಮೋದಿ… ಅಂತಿದ್ರು. ಮೋದಿ ಸ್ವಾತಂತ್ರ‍್ಯಕ್ಕೆ ಹೋರಾಡಿದ್ರಾ, ಸಂಗೊಳ್ಳಿ ರಾಯಣ್ಣ ರೀತಿ ಹೋರಾಡಿದ್ರಾ? ಜನ ಸುಮ್ನೆ ಮೋದಿ… ಮೋದಿ… ಅಂತಾರೆ. 2 ಕೋಟಿ ಕೆಲಸ ಎಲ್ಲಿ, ಅಚ್ಚೇ ದಿನ್ ಎಲ್ಲಿ, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ? 12 ವರ್ಷ ಆಯ್ತು ಪ್ರಧಾನಿ ಆಗಿ, ಕಪ್ಪು ಹಣ ತಂದು 15 ಲಕ್ಷ ಹಾಕ್ತೀನಿ ಅಂದ್ರು ಹಾಕಿದ್ರಾ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು? ಪಾಪ… ಜನರಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಇತ್ತೀಚೆಗೆ ಬಿಜೆಪಿಯ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆ ಸರಿಯಾಗಿ ಜಾರಿಗೆ ತರದ ಕಾರಣ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದು ಹೇಳಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಸಿ.ಟಿ. ರವಿ ಅವರನ್ನು “ಲೂಟಿ ರವಿ” ಎಂದು ಸಂಬೋಧಿಸಿದ್ದಾರೆ. ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ, “ನಾನು ರಾಹುಲ್ ಗಾಂಧಿ ಅವರಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡಿ ಎಂದು ಹೇಳಿದಾಗ, ಕೊಟ್ಟ ಮಾತಿನಂತೆ ನಾನು ರಾಜೀನಾಮೆ ನೀಡಿದೆ” ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಶಾಸಕರು ತಮ್ಮನ್ನು ತೆಗೆದುಹಾಕಿಲ್ಲ, ಬದಲಿಗೆ ಅದು ರಾಹುಲ್ ಗಾಂಧಿ ಅವರಿಗೆ ನೀಡಿದ ಮಾತಿಗೆ ಬದ್ಧವಾಗಿದ್ದರಿಂದ ಎಂದು ಹೇಳಿದರು.

ರಾಜಕೀಯದಲ್ಲಿ ಯಾವುದಾದರೂ ಸರ್ಕಾರ ಇದ್ದು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ, ಅದು ಸಿದ್ದರಾಮಯ್ಯನ ಸರ್ಕಾರ, ಕಾಂಗ್ರೆಸ್ ಸರ್ಕಾರ ಎಂದರು. ರಾಜೀನಾಮೆ ನೀಡಬಾರದೆಂದು ಅನೇಕರು ನನಗೆ ಸಲಹೆ ನೀಡಿದ್ದರು, ಆದರೆ ನಾನು ಕೊಟ್ಟ ಮಾತಿಗೆ ಬದ್ಧನಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Related Articles

Back to top button