
ಬೆಂಗಳೂರು: ನಿರಂತರ ಓಡಾಟದಿಂದ ಸುಸ್ತಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿರುವ ಘಟನೆ ನಡೆದಿದೆ.
ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿ ಕೊಂಚ ಅಸ್ವಸ್ಥಾದರು. ಈ ವೇಳೆ ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ.
ಕಲೆದ ಕೆಲ ದಿನಗಳಿಂದ ಸತತವಾಗಿ ಓಡಾಟ, ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಸಿರುವ ಸಿಎಂ ಡಿ.ಕೆ.ಶಿವಕುಮಾರ್ ಅರಿಗೆ ಸರಿಯಾಗಿ ವಿಶ್ರಾಂತಿ ಕೂಡ ಸಿಗುತ್ತಿಲ್ಲ. ಇಂದು ಬೆಳಗ್ಗಿನಿಂದಲೂ ಓಡಾಡುತ್ತಲೇ ಇರುವ ಸಿಎಂ, ಕೊಂಚ ಬಳಲಿದ್ದರು. ಬಿಪಿ ಏರುಪೇರಾಗಿ ಅಸ್ವಸ್ಥರಾಗಿದ್ದರು. ಬಳಿಕ ವೈದ್ಯರ ಚಿಕಿತ್ಸೆ ನಂತರ ಸಹಜ ಸ್ಥಿತಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.




