LatestNationalPolitics

*ಪ್ರಧಾನಿ ಮೋದಿ ಬಾಂದ್ರಾ-ಕುರ್ಲಾ ಕಾರ್ಯಕ್ರಮಕ್ಕೂ ಮುನ್ನ ನಕಲಿ ಪಿಎಂಒ ಐಡಿ, ಬಂದೂಕು ಹಿಡಿದು ಓಡಾಟ: ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈನಲ್ಲಿನ ಕಾರ್ಯಕ್ರಮದ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರು ಶಂಕಿತರು ಓಡಾಟ ನಡೆಸಿದ್ದು, ಮುಂಬೈ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

Home add -Advt

ಮುಂಬೈನ ಬಾಂದ್ರಾ–ಕುರ್ಲಾ ಸಂಕೀರ್ಣದಲ್ಲಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ್ಮೆ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು.

ಅವರಲ್ಲಿ ಒಬ್ಬನ ಬಳಿ ಬಂದೂಕು ಪತ್ತೆಯಾಗಿದ್ದು, ಮತ್ತೊಬ್ಬ ತನ್ನನ್ನ ಪ್ರಧಾನಮಂತ್ರಿ ಕಚೇರಿಯ (PMO) ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಪರಿಶೀಲನೆ ವೇಳೆ ಆತ ಹೊಂದಿದ್ದ ಗುರುತಿನ ಚೀಟಿ ನಕಲಿ ಎಂಬುದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಇಂತದ್ದೊಂದು ಭದ್ರತಾ ವೈಫಲ್ಯ ಸಂಭವಿಸಿದೆ.

ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳಿಗೂ ಮುನ್ನ ಈ ಘಟನೆ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣ ಮಾಡಿದೆ.

Related Articles

Back to top button