Belagavi NewsBelgaum NewsCrimeKannada NewsKarnataka News

*ಯುವತಿ ನಾಪತ್ತೆ: ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಬೆನ್ನಾಳ್ಳಿ ಚವಾಟಗಲ್ಲಿ ನಿವಾಸಿ ಪ್ರಣಾಲಿ ಮೋಹನ ಸಕಟ (ವ.19) ಎಂಬುವಳು ಸೆಪ್ಟೆಂಬರ್ 7 ರಂದು ಬೆನ್ನಾಳ್ಳಿ ಗ್ರಾಮದ ಕಿರಾಣಿ ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ಯುವತಿ ಚಹರೆ: 4 ಫೂಟ್.06 ಇಂಚ್ ಎತ್ತರ, ಗೋದಿಗೆಂಪು ಬಣ್ಣ ಮೈಯಿಂದ ಸಡಪಾತಳ, ದುಂಡು ಮುಖ, ಸಾದಾರಣ ಉದ್ದ ಮೂಗು, ಹಸಿರು ಬಣ್ಣದ ಚೂಡಿಧಾರ ಟಾಪ ಧರಿಸಿದ್ದು, ನೀಲಿ ಬಣ್ಣದ ಜೀನ್ಸ ಧರಿಸಿರುತ್ತಾಳೆ. ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ ಬಾಷೆ ಮಾತನಾಡುತ್ತಾಳೆ.

Home add -Advt

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಾಕತಿ ಪಿ.ಎಸ್ ದೂರವಾಣಿ ಸಂಖ್ಯೆ 0831-2405203, ಪಿ.ಐ ಕಾಕತಿ ಪೋಲೀಸ್ ಠಾಣೆ 9480804115, ಪಿ.ಎಸ್.ಐ ಕಾಕತಿ ಪೊಲೀಸ್ ಠಾಣೆ 9480804083 ಗಳಿಗೆ ಸಂಪರ್ಕಿಸಬುದಾಗಿದೆ ಎಂದು ಕಾಕತಿ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button