
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಾಂಸ ಮಾರಾಟ ಅಂಗಡಿಗಳನ್ನು ದಿನಾಂಕ 14/09/2026 ರಂದು ಬಂದ್ ಮಾಡುವುದು ಕಡ್ಡಾಯವಾಗಿರುತ್ತದೆ.
ಈ ಹಿನ್ನಲೆಯಲ್ಲಿ ಮಾಂಸ ಅಂಗಡಿಗಳ ಮಾಲೀಕರುಗಳು ಸೆ.14 2026 ರಂದು ತಮ್ಮ ಅಂಗಡಿಗಳನ್ನು ಬಂದು ಮಾಡಿ ಸಹಕರಿಸಬೇಕು, ಈ ದಿನದಂದು ಮಾಂಸ ಮಾರಾಟ ಅಂಗಡಿ ಮಾಲೀಕರು ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.



