Belagavi NewsKannada NewsKarnataka News

*ಬೆಳಗಾವಿ ಪಾಲಿಕೆಗೆ ಭೇಟಿ ನೀಡಿದ ವಿಶ್ವದ ಅತ್ಯಂತ ಕುಬ್ಜ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವದ ಅತಿ ಕಿರಿಯ ಎತ್ತರದ ಮಹಿಳೆ ಎಂಬ ಖ್ಯಾತಿ ಪಡೆದಿರುವ ಮಹಿಳೆ ಬೆಳಗಾವಿ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದರು. 

ಮಹಾರಾಷ್ಟ್ರ ರಾಜ್ಯದ ನಾಗ್ಪುರ ಮೂಲದ 32 ವರ್ಷದ ಜ್ಯೋತಿ ಅಮ್ಗೆ  ಅವರು 2 ಅಡಿ 0.7 ಇಂಚ ಎತ್ತರ ಇದ್ದು, 5 ಕೆ.ಜಿ. ತೂಕ ಹೊಂದಿದ್ದಾರೆ. ಜಗತ್ತಿನ ಅತೀ ಅತೀ ಕಿರಿಯ ಎತ್ತರ ಹೊಂದಿರುವ ಹಿನ್ನೆಲೆ ‘ಗಿನ್ನಿಸ್ ದಾಖಲೆ’ಗೆ ಅವರು ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಕೇವಲ ಕಿರುತೆರೆ ಹಾಗೂ ಟಿವಿ ರಿಯಾಲಿಟಿ ಶೋಗಳಲ್ಲಿ ಮಾತ್ರ ನೋಡುತ್ತಿದ್ದ ಜ್ಯೋತಿ ಅವರನ್ನು ನೇರವಾಗಿ ಕಣ್ತುಂಬಿಕೊಳ್ಳುವ ಭಾಗ್ಯ ಬೆಳಗಾವಿ ಜನತೆಗೆ ಸಿಕ್ಕಿತು.

Home add -Advt

​ಖಾಸಗಿ ಶೋರೂಂ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೆಳಗಾವಿಗೆ ಆಗಮಿಸಿದ್ದ ಜ್ಯೋತಿ ಅವರು, ಮಹಾನಗರ ಪಾಲಿಕೆಗೂ ಭೇಟಿ ನೀಡಿ ಎಲ್ಲರ ಗಮನ ಸೆಳೆದರು. ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಹಾಗೂ ಮೇಯರ್ ಪ್ರೀತಿ ಕಾಮಕರ್ ಅವರನ್ನು ಭೇಟಿಯಾಗಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಇನ್ನು ಕೇವಲ 2 ಅಡಿ 0.7 ಇಂಚ ಎತ್ತರ ಇರುವ ಇವರನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಾಗರಿಕರು ಬೆರಗುಗಣ್ಣಿನಿಂದ ನೋಡಿದರು.

ಈ ವೇಳೆ ಮಾತನಾಡಿದ ಮೇಯರ್ ಪ್ರೀತಿ ಕಾಮಕರ್, ನಾವು ಜ್ಯೋತಿ ಅವರನ್ನು ಟಿವಿ ರಿಯಾಲಿಟಿ ಶೋಗಳಲ್ಲಿ ನೋಡುತ್ತಿದ್ದೆವು. ಇಂದು ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ದೊರೆತಿದ್ದು, ನಮಗೆ ಅತ್ಯಂತ ಸಂತಸ ತಂದಿದೆ. ಜ್ಯೋತಿ ಅವರ ಶಾರೀರಿಕ ಬೆಳವಣಿಗೆ ಕೇವಲ ಎರಡು ಅಡಿ ಇರಬಹುದು. ಆದರೆ, ಅದೇ ಇಂದು ಅವರು ಇಡೀ‌ ವಿಶ್ವವೇ ಗುರುತಿಸುವಂತೆ ಮಾಡಿದೆ. ಗಿನ್ನಿಸ್ ರೆಕಾರ್ಡ್ ದಾಖಲೆ ಬರೆದಿರುವ ಅವರ ಸಾಧನೆ ದೊಡ್ಡದು ಎಂದು ಶ್ಲಾಘಿಸಿದರು.

ಜ್ಯೋತಿ ಅಮ್ಗೆ  ಮಾತನಾಡಿ, ನಾನು ಬೆಳಗಾವಿ ನಗರಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದ್ದೇನೆ. ಈ ಸುಂದರ ನಗರವನ್ನು ವೀಕ್ಷಿಸುವುದು ಮತ್ತು ಇಲ್ಲಿನ ಆತ್ಮೀಯ ಜನರನ್ನು ಭೇಟಿಯಾಗಿದ್ದು ನನಗೆ ಸಿಕ್ಕ ದೊಡ್ಡ ಅವಕಾಶ. ಶೋರೂಂ ಉದ್ಘಾಟನೆಗೆ ಬಂದಿದ್ದ ನಾನು, ಬೆಳಗಾವಿ ಮಹಾನಗರ ಪಾಲಿಕೆಗೂ ಭೇಟಿ ನೀಡಬೇಕೆಂಬ ಆಸೆಯಿಂದ ಇಲ್ಲಿಗೆ ಬಂದೆ. ಪಾಲಿಕೆಯಲ್ಲಿ ಎಲ್ಲರೂ ನನ್ನನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ನನ್ನೊಂದಿಗೆ ಫೋಟೋ ತೆಗೆಸಿಕೊಂಡರು. ಬೆಳಗಾವಿಯ ಜನರ ಅನ್ಯೋನ್ಯತೆ ನನಗೆ ತುಂಬಾ ಇಷ್ಟವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

Related Articles

Back to top button