*ಪ್ರಿಯತಮ, ತಾಯಿ ಜೊತೆ ಸೇರಿ ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಪತಿಯನ್ನೇ ಕೊಂದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಪ್ರಿಯಕರ ಹಾಗೂ ತನ್ನ ತಾಯಿ ಜೊತೆ ಸೇರಿ ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಪತಿಯನ್ನ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಅನ್ಡೆದಿದೆ.
ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಿತ್ತಗನೂರಿನ ಯಲ್ಲಪ್ಪ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ಪರಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಮಹಿಳೆ ಗಂಡನನ್ನ ಕೊಂದು ಬಳಿಕ ಹೃದಯಾಘಾತ ಎಂದು ನಾಟಕವಾಡಿದ್ದಾಳೆ. ಆದ್ರೆ ತನಿಖೆ ಬಳಿಕ ನಾಟಕ ಬಯಲಾಗಿದೆ. ಸದ್ಯ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಹಿನಾ ಬಾನು, ಆಕೆಯ ಪ್ರಿಯತಮ ನಹೀಮ್ ಸೇರಿ ಮೂವರನ್ನು ಬಂಧಿಸಲಾಗಿದೆ. 20 ವರ್ಷಗಳ ಹಿಂದೆಯೇ ಮುಬಾರಕ್ ಎಂಬಾತನೊಂದಿಗೆ ಶಹಿನಾ ಬಾನು ವಿವಾಹವಾಗಿದ್ದಳು. ಆದ್ರೆ ಪತಿ ಮುಬಾರಕ್ ಕಳೆದ 2 ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ. ಇತ್ತ ದಂಪತಿ ಮಗಳೂ ಸಹ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಈ ವೇಳೆ ಶಹಿನಾ ಮಗಳನ್ನ ಗುಣಪಡಿಸೋದಾಗಿ ಮನೆಗೆ ಬಂದಿದ್ದ ನಹೀಮ್ ಉದ್ದೀನ್ ಖುರೇಶಿ ಎಂಬಾತನೊಂದಿಗೆ ಸಲುಗೆ ಬೆಳೆಸಿದ್ದಾಳೆ. ಸಲುಗೆ ಇಬ್ಬರ ನಡುವೆ ಪ್ರೀತಿಗೆ ತಿರುಗಿದೆ
.
ಪತಿಯನ್ನ ನೋಡಿಕೊಳ್ಳಲಾಗದೇ ಬೇಸತ್ತಿದ್ದ ಶಹಿನಾ ಬಾನುಗೆ ನಹೀಮ್, ಕೊಲೆ ಮಾಡುವ ಐಡಿಯಾ ನೀಡಿದ್ದನಂತೆ. ಅದರಂತೆ ಶಹಿನಾ ಬಾನು ತನ್ನ ತಾಯಿ ಜೊತೆಗೆ ಸೇರಿ ಸೆ.9 ಕೊಲೆಗೆ ಪ್ಲ್ಯಾನ್ ಮಾಡಿದ್ದಾಳೆ. ಪತಿ ಮಲಗಿದ್ದಲ್ಲೆ ಉಸಿರುಗಟ್ಟಿಸಿ, ಖಾಸಗಿ ಭಾಗಕ್ಕೆ ಒದ್ದು ಕೊಲೆ ಮಾಡಿದ್ದಾರೆ. ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ತಾಯಿ ಮಗಳು ಇಬ್ಬರೂ ಕಠೆ ಕಟ್ಟಿದ್ದಾರೆ. ಆದರೆ ಈ ಸಾವಿನ ಬಗ್ಗೆ ಅನುಮಾಅನ ಇರುವುದಾಗಿ ಮೃತ ಮುಬಾರಕ್ ಸಂಬಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ಕೊಲೆ ರಹಸ್ಯ ಬಯಲಾಗಿದೆ.



