*ಮೈಸೂರು ದಸರಾ: ಗೋಲ್ಡ್ ಕಾರ್ಡ್ ಹಾಗೂ ವಿವಿಧ ಟಿಕೆಟ್ಗಳ ಬುಕ್ಕಿಂಗ್ ಗೆ ಈ ಲಿಂಕ್ ಕ್ಲಿಕ್ ಮಾಡಿ*

ಪ್ರಗತಿವಾಹಿನಿ ಸುದ್ದಿ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ದಸರಾ ಮಹೋತ್ಸವದ ಗೋಲ್ಡ್ ಕಾರ್ಡ್ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಆನ್ ಲೈನ್ ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ.
ಬೆಳಿಗ್ಗೆ 11:30 ರಿಂದ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದೆ. ಟಿಕೆಟ್ ಬುಕಿಂಗ್ ಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಗೋಲ್ಡ್ ಕಾರ್ಡ್ಗೆ 6,500 ರೂ., ಜಂಬೂ ಸವಾರಿಗೆ 3,500 ರೂ., ಪಂಜಿನ ಕವಾಯತಿಗೆ 1,500 ರೂ. ಹಾಗೂ ಡ್ರೋನ್ ಶೋ ವೀಕ್ಷಣೆಗೆ 1,000 ರೂ. ದರ ನಿಗದಿಪಡಿಸಲಾಗಿದೆ.
ಗೋಲ್ಡ್ ಕಾರ್ಡ್ ಖರೀದಿದಾರರಿಗೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ತಲಾ ಒಂದು ಬಾರಿ ಉಚಿತ ಪ್ರವೇಶ ಸಿಗಲಿದೆ.
ಅಕ್ಟೋಬರ್ 11ರಿಂದ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದೆ. ಅಕ್ಟೋಬರ್.21 ರಂದು ನಡೆಯಲಿರುವ ಜಂಬೂಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳಿಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್ಲೈನ್ ಬುಕಿಂಗ್ ಶುರುವಾಗಿದ್ದು, ಮೈಸೂರು ದಸರಾ ಅಧಿಕೃತ ವೆಬ್ಸೈಟ್ www.mysoredasara.gov.in ನಲ್ಲಿ ಟಿಕೆಟ್ ಕಾಯ್ದಿರಿಸಬಹುದು.


