Kannada NewsKarnataka NewsLatest

*ನಿವೃತ್ತ ಅಧಿಕಾರಿಗೆ ಲೋಕಾಯುಕ್ತ ಬಿಸಿ:* *ಬೀದರ್‌ನಲ್ಲಿ ಏಕಕಾಲಕ್ಕೆ 3 ಕಡೆ ದಾಳಿ*

Lokayukta cracks down on retired officer: Simultaneous raids at three locations in Bidar.

ಪ್ರಗತಿವಾಹಿನಿ ಸುದ್ದಿ, ಬೀದರ್: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಕೃಷಿ ಇಲಾಖೆ ಆಡಳಿತಾಧಿಕಾರಿ ಮಾಣೀಕ್ ಶೆರಿಕಾರ್ ಅವರಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ಬೀದರ್‌ನಲ್ಲಿ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲಕ್ಕೆ 3 ಕಡೆ ದಾಳಿ ನಡೆಸಿ ತೀವ್ರ ಶೋಧ ನಡೆಸಿದೆ.

ಲೋಕಾಯುಕ್ತ ಡಿವೈಎಸ್‌ಪಿ ಹನುಮಂತ ರೆಡ್ಡಿ ನೇತೃತ್ವದ ತಂಡ ಬೀದರ್ ನಗರದ ಹಕ್ಕ್ ಕಾಲೋನಿಯಲ್ಲಿರುವ ನಿವಾಸ, ಹುಮ್ನಾಬಾದ್‌ನಲ್ಲಿರುವ ನಿವಾಸ ಹಾಗೂ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಬಳಿಯಿರುವ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳು ಹಾಗೂ ಆಸ್ತಿ ವಿವರಗಳ ಪರಿಶೀಲನೆಗಾಗಿ ಲೋಕಾಯುಕ್ತ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೂರು ಸ್ಥಳಗಳಲ್ಲೂ ಅಧಿಕಾರಿಗಳು ತೀವ್ರ ತಪಾಸಣೆ ನಡೆಸುತ್ತಿದ್ದು, ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ದಾಳಿಯ ವೇಳೆ ಪತ್ತೆಯಾಗಿರುವ ದಾಖಲೆಗಳು ಹಾಗೂ ಇತರೆ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಶೋಧ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.

Related Articles

Back to top button