BusinessKannada NewsLatestNational

*ವಿಮಾ ಏಜೆಂಟ್ ಗಳಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರ್ಕಾರ*

ವಿಮಾ ಏಜೆಂಟ್ ಗಳಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರ್ಕಾರ

ವಿಮಾ ಏಜೆಂಟ್ ಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಇನ್ಮುಂದೆ ವಿಮಾ ಏಜೆಂಟ್‌ಗಳು ಹಾಗೂ ವಿತರಕರಿಗೆ ನೀಡುವ ಕಮಿಷನ್‌ಗೆ ಮಿತಿ ನಿಗದಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.

ವಿಮಾ ಸೇವೆಗಳನ್ನು ಮತ್ತಷ್ಟು ಪಾರದರ್ಶಕ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಸೆಪ್ಟೆಂಬರ್ 23ರಂದು ‘Recalibrating Economics of Insurance Distribution’ ಎಂಬ ಸಾರ್ವಜನಿಕ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದ್ದು, ವಿಮಾ ವಿತರಣಾ ವ್ಯವಸ್ಥೆ, ಕಮಿಷನ್, ವೆಚ್ಚ ಹಾಗೂ ಗ್ರಾಹಕರಿಗೆ ಮಾಹಿತಿ ನೀಡುವ ವಿಚಾರದಲ್ಲಿ ಹಲವು ಸುಧಾರಣೆಗಳನ್ನು ಸೂಚಿಸಿದೆ.

ಪ್ರಸ್ತಾವನೆಯ ಪ್ರಕಾರ ಜೀವ ವಿಮೆಯಲ್ಲಿ ಪಾಲಿಸಿಯ ಪ್ರೀಮಿಯಂ ಪಾವತಿ ಅವಧಿಗೆ ಅನುಗುಣವಾಗಿ ಮೊದಲ ವರ್ಷದ ಕಮಿಷನ್‌ಗೆ ಮಿತಿ ಇರಲಿದೆ.

5 ವರ್ಷಕ್ಕಿಂತ ಕಡಿಮೆ ಅವಧಿಯ ಪಾಲಿಸಿಗಳಿಗೆ ವಿತರಣಾ ಸಂಸ್ಥೆಗಳಿಗೆ ಶೇ.5 ಮತ್ತು ಏಜೆಂಟ್‌ಗಳಿಗೆ ಶೇ.6.25ರಷ್ಟು ಕಮಿಷನ್ ಮಿತಿ ಪ್ರಸ್ತಾಪಿಸಲಾಗಿದೆ.

Related Articles

Back to top button