EducationKarnataka NewsLatest

*ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ: ಎಷ್ಟು ದಿನ ಗೊತ್ತೇ?*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಶಾಲೆಗಳಿಗೆ ಈ ಬಾರಿಯ ದಸರಾ ರಜೆ ಘೋಷಿಸಲಾಗಿದೆ. ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲೇ ಮಕ್ಕಳಿಗೆ ದಸರಾ ರಜೆ ಘೋಷಿಸಿರುವುದು ಮಕ್ಕಳಲ್ಲು ಸಂತಸ ತಂದಿದೆ.

ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು 2026 – 27ನೇ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ದಸರಾ ರಜೆ ಬಗ್ಗೆ ಉಲ್ಲೇಖಿಸಿದೆ. ಈ ಬಾರಿ ದಸರಾ ರಜೆ 19 ದಿನಗಳ ಕಾಲ ಇರಲಿದೆ. ಅಕ್ಟೋಬರ್‌ 3 ರಿಂದ ಅಕ್ಟೋಬರ್ 21 ವರೆಗೂ ದಸರಾ ರಜೆ ಇರಲಿದೆ. ಆ ಬಳಿಕ 2ನೇ ಅವಧಿಯ ಶಾಲೆಗಳು ಆರಂಭವಾಗಲಿವೆ.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿದ ಬಳಿಕ ದಸರಾ ರಜೆಗಳು ಆರಂಭವಾಗಲಿವೆ. ಅಕ್ಟೋಬರ್ 2 ರಿಂದಲೇ ಶಾಲಾ ಮಕ್ಕಳಿಗೆ ನಿಯಮಿತ ತರಗತಿಗಳು ಇರುವುದಿಲ್ಲ. ಅಂದು ಗಾಂಧಿ ಜಯಂತಿ ಇರುವುದರಿಂದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುತ್ತದೆ. ಅಕ್ಟೋಬರ್ 3 ರಿಂದಲೇ ಅಧಿಕೃತವಾಗಿ ರಜೆ ಆರಂಭವಾಗುವುದರಿಂದ, ಅಕ್ಟೋಬರ್ 2 ರಿಂದಲೇ ಮಕ್ಕಳಿಗೆ ನಿತ್ಯದ ಪಾಠ-ಪ್ರವಚನಗಳಿಂದ ಕೆಲ ದಿನಗಳ ಕಾಲ ಬಿಡುವು ಸಿಗಲಿದೆ.

ಶಿಕ್ಷಣ ಇಲಾಖೆಯ ಘೋಷಣೆ ಮಾಡಿರುವ ದಸರಾ ರಜೆಯೂ ಕೇವಲ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಖಾಸಗಿ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಜೆಯನ್ನು ಈಗಾಗಲೇ ಘೋಷಣೆ ಮಾಡಿವೆ. ಕೆಲ ಶಾಲೆಗಳು ಒಂದು ವಾರ, ಇನ್ನಾ ಕೆಲವು 10 ದಿನ ರಜೆ ನೀಡಿವೆ.

Related Articles

Back to top button