Kannada NewsKarnataka NewsPolitics

*ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್*

ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಗರಂ

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ರಾಜ್ಯ ಸರ್ಕಾರ ಮರೆತಿದೆ ಎಂದು ಅವರು ಆರೋಪಿಸಿದ್ದಾರೆ. ವಿಶೇಷವಾಗಿ, 79A, B, C ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತರುವ ವಿಷಯದಲ್ಲಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಅವರು ದೂರಿದ್ದಾರೆ.

ಬಜೆಟ್ ಮಂಡನೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದಾಗ, ಈ ತಿದ್ದುಪಡಿಗಳನ್ನು ಬಜೆಟ್‌ನಲ್ಲಿ ಸೇರಿಸಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಅಂತಿಮವಾಗಿ ಸದನದಲ್ಲಿ ಮಂಡನೆಯಾದ ಬಜೆಟ್ ಪ್ರತಿಯಲ್ಲಿ ಈ ಪ್ರಸ್ತಾಪ ಮಾಯವಾಗಿತ್ತು ಎಂದು ಪಾಟೀಲ್ ತಿಳಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಹಿಂದೆ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೆ. ಕಳೆದ ಬಜೆಟ್‌ನಲ್ಲಿ ಪ್ರಕಟ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಬಜೆಟ್ ಪ್ರೂಫ್ ರೀಡಿಂಗ್​ನಲ್ಲೂ ಕಾಯ್ದೆಗೆ ಬದಲಾವಣೆ ತರುತ್ತೇವೆ ಎಂದು ಇತ್ತು. ಕೊನೇ ಘಳಿಗೆಯಲ್ಲಿ ಬಜೆಟ್ ಕಾಪಿಯಲ್ಲೇ ಆ ವಿಚಾರ ಹೈಡ್ ಮಾಡಲಾಯ್ತು. ಯಾವ ಮಾಯಾಜಾಲದಿಂದ ಬಜೆಟ್ ಅಂಶವನ್ನೇ ಮಾಯ ಮಾಡಿದ್ರು ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾಅರೆ.

ಇಂದು ರಣದೀಪ್ ಸಿಂಗ್ ಸುರ್ಜೇವಾಲ ಕರೆದು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಿರಿ ಅಂದ್ರು. ನಾನು ಈ ವಿಚಾರ ಪ್ರಸ್ತಾಪಿಸಿ ಯಾಕೆ ಭರವಸೆ ಕೊಟ್ರಿ ಅಂದೆ. ಮೊದಲು ಪ್ರಣಾಳಿಕೆಯಲ್ಲಿ ಭರವಸೆ ಈಡೇರಿಸಿ ಅಂತ ಹೇಳಿದ್ದೇನೆ. ಈ ಸಂಬಂಧ ನಾನು ರಾಹುಲ್‌ ಗಾಂಧಿಗೂ ಪತ್ರ ಬರೆಯುತ್ತೇನೆ. ನಮಗೂ ಬಿಜೆಪಿಗೂ ವ್ಯತ್ಯಾಸ ಏನು? ಬಿಜೆಪಿಯವರು ರಿಯಲ್ ಎಸ್ಟೇಟ್​ಗಾಗಿ ಮಾಡಿದ್ರು. ನಮ್ಮ ಸರ್ಕಾರಕ್ಕೂ ಬಿಜೆಪಿಗೂ ಏನು ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button