Belagavi NewsBelgaum NewsHealthKannada NewsKarnataka News

*ವಿಶ್ವ ಹೃದಯ ದಿನ: ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೆಎಲ್ಇ ವೈದ್ಯರ ಸಲಹೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೈಗೆಟುಕುವ ದರದಲ್ಲಿ ಗುಣಮಟ್ಟದ ಹೃದಯ ಚಿಕಿತ್ಸೆಯನ್ನು ನೀಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಮುಂಚೂಣಿಯಲ್ಲಿದೆ. ಹೃದಯ ಸಂಬಂಧಿತ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿ ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಹೇಳಿದರು.

ವಿಶ್ವ ಹೃದಯ ದಿನದ ಅಂಗವಾಗಿ ಸೆ.29ರಂದು ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹೃದ್ರೋಗ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳೊಂದಿಗೆ ಅಂತರಾಷ್ಟ್ರೀಯ ಗುಣಮಟ್ಟದ ಹೃದಯ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದರು.

ಹಿರಿಯ ಹೃದಯ ತಜ್ಞ ಡಾ. ಸುರೇಶ ಪಟ್ಟೇದ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಕೆಲಸದ ಒತ್ತಡದಿಂದ ಯುವಕರಲ್ಲಿಯೂ ಹೃದಯಾಘಾತದ ಪ್ರಕರಣಗಳು ಕಂಡುಬರುತ್ತಿವೆ. ಹೀಗಾಗಿ ದೇಹದ ಪ್ರಮುಖ ಅಂಗವಾಗಿರುವ ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಒತ್ತಡದ ಜೀವನಶೈಲಿಯನ್ನು ನಿಯಂತ್ರಿಸುವುದರ ಜೊತೆಗೆ ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಎಂದು ತಿಳಿಸಿದರು.

ಅನಾರೋಗ್ಯಕರ ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆ, ಮದ್ಯಪಾನ ಮತ್ತು ಧೂಮಪಾನ ಸೇರಿದಂತೆ ಹಲವು ಅಂಶಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕಾರ್ಡಿಯಾಕ್ ಟೆಕ್ನಿಷಿಯನ್ ವಿದ್ಯಾರ್ಥಿನಿಯರು ಹೃದಯದ ಆರೋಗ್ಯದ ಕುರಿತು ಕಿರು ನಾಟಕ ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಡಾ. ಸಂಜಯ ಪೋರವಾಲ, ಡಾ. ಸಮೀರ ಅಂಬರ, ಡಾ. ಪ್ರಸಾದ ಎಂ.ಆರ್., ಡಾ. ವಿಜಯಾನಂದ ಮೆಟಗುಡಮಠ, ಡಾ. ವಿಶ್ವನಾಥ ಹೆಸರೂರ, ಡಾ. ಸುಹಾಸಿನಿ ಅಥರ್ಗಾ, ಡಾ. ಕಾಡಪ್ಪ ಹುಕ್ಕೇರಿ, ಡಾ. ಡಾನಿಶ್ ಮೊಮಿನ್, ಶಿವಾಜಿ, ಶಿವಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WORLD HEART DAY “ DON’T MISS A BEAT” ON 29.09.2026

The Department of Cardiology, KLE’s Dr. Prabhakar Kore Hospital & MRC, Belagavi, celebrated World Heart Day on 29th September 2026 with an awareness programme. The theme for this year, “Don’t Miss a Beat,” emphasized the importance of early detection and timely intervention in preventing heart disease. The programme highlighted that early diagnosis is the key to effective treatment and prevention of cardiovascular diseases.

The programme was attended by Medical Director, Co. Dr. Dayanand, who congratulated the Department of Cardiology for its exemplary services, innovative procedures, and adoption of the latest technologies in the field of cardiovascular care.

Dr. Suresh V. Patted spoke on the importance of prevention and early detection of heart disease. He emphasized the need for awareness, regular health check-ups, early diagnosis, and timely treatment to reduce the burden of cardiovascular diseases. The global significance of World Heart Day and the efforts of international organizations and professional bodies working towards cardiovascular health awareness were also highlighted.

The programme was attended by Dr. Sanjay C Porwal, Prof & HOD, Dr. Suresh V Patted,  Dr. Sameer Ambar, Dr. Prasad M.R. Dr. V. B. Metgudmath, Dr. Vishwanath Hesarur, Dr. Suhasini Atharga, Dr. Danish Menon, Dr. Kadappa Hukkeri, along with PRO’s Mr. Shivanand & Mr. Shivaji , staff, and students of the institution.

As part of the awareness programme, B.Sc. Cardiac Care Technology students presented an informative skit on the early detection and prevention of heart disease. The skit focused on creating awareness among the public about cardiovascular risk factors, preventive measures, and the importance of seeking medical attention at an early stage. The performance was highly appreciated by the guests, faculty, staff, and students.

The programme concluded with a strong message that “Don’t Miss a Beat” is not merely a theme but a reminder to recognize the warning signs of heart disease, undergo timely health evaluation, and adopt a heart-healthy lifestyle.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button