CrimeKannada NewsNational

*BREAKING: ನಿವೃತ್ತ ಐಎಎಸ್ ಅಧಿಕಾರಿಯ ಬರ್ಬರ ಹತ್ಯೆ*

ನಾಪತ್ತೆಯಾದ ಮನೆ ಕೆಲಸದವನ ಮೇಲೆ ಅನುಮಾನ


ಪ್ರಗತಿವಾಹಿನಿ ಸುದ್ದಿ: ದುಷ್ಕರ್ಮಿಗಳು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.

ರಾಕೇಶ್ ಅಗರ್ವಾಲ್ ಹತ್ಯೆಯಾದ ನಿವೃತ್ತ ಐಎ ಎಸ್ ಅಧಿಕಾರಿ. ರಾಕೇಶ್ ಅಗರ್ವಾಲ್ ಅವರನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಲಾಗಿದ್ದು, ಅವರ ಶವ ಮನೆಯಲ್ಲಿ ಪತ್ತೆಯಾಗಿದೆ.

ದೆಹಲಿಯ ರಾತಿಬಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಜ್ ನಗರದಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಅಗರ್ವಾಲ್ ಪತ್ನಿಯ ಜೊತೆ ದೆಹಲಿಯ ಮನೆಯಲ್ಲಿ ವಾಸವಾಗಿದ್ದರು. ಎರಡು ದಿನಗಳ ಹಿಂದಷ್ಟೇ ಮನೆ ಕೆಲಸಕ್ಕೆಂದು ಹೊಸದಾಗಿ ನೌಕರನೊಬ್ಬ ಬಂದಿದ್ದ. ಘಟನೆ ಬಳಿಕ ಆ ನೌಕರ ನಾಪತ್ತೆಯಾಗಿದ್ದಾನೆ.

ಈ ಹಿನ್ನೆಲೆಯಲ್ಲಿ ರಾಕೇಶ್ ಅಗರ್ವಾಲ್ ಅವರ ಹತ್ಯೆಗೆ ಆತನೇ ಕಾರಣನಿರಬಹುದೇ? ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನೌಕರ ನಾಪತ್ತೆಯಾಗಿರುವುದರಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button