
ಪ್ರಗತಿವಾಹಿನಿ ಸುದ್ದಿ: ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಬಾವಿಗೆ ಹಾರಿದ್ದು, ಓರ್ವ ಮಗಳು ಬದುಕಿದ್ದು, ತಾಯಿ ಹಾಗೂ ಇನ್ನೋರ್ವ ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದಲ್ಲಿ ಈ ದುರಂತ ನಡೆದಿದೆ. ಗೌರಮಮ್ಮ (52) ಹಾಗೂ ಮಗಳು ಭಾಗ್ಯಶ್ರೀ (25) ಆತ್ಮಹತ್ಯೆಗೆ ಶರಣಾದವರು. ಇನ್ನೋರ್ವ ಮಗಳು ಅಂಬಿಕಾ (21) ಸ್ಥತಿ ಗಂಭೀರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಲದ ವಿಚಾರವಾಗಿ ಪತಿ ಪೀರಪ್ಪ ಹಾಗೂ ಪತ್ನಿ ಗೌರಮ್ಮ ನಡುವೆ ಜಗಳವಾಗಿದ್ದು, ಜಗಲ ವಿಕೋಪಕ್ಕೆ ತಿರುಗಿದೆ. ಮನನೊಂದ ತಾಯಿ ಗೌರಮ್ಮ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾರೆ.
ಸ್ಥಳೀಯರು ಓರ್ವ ಮಗಳನ್ನು ರಕ್ಷಿಸಿದ್ದು, ತಾಯಿ ಹಾಗೂ ಇನ್ನೋರ್ವ ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



