
ಪ್ರಗತಿವಾಹಿನಿ ಸುದ್ದಿ: ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಡಿಎ ಆಯುಕ್ತರು ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ 48 ಗಂಟೆಗಳ ಡೆಡ್ಲೈನ್ ನೀಡಿದ್ದಾರೆ.
ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ಫೈಜರ್ ಕಂಪನಿಯ ಔಷಧಿಗಳು ಪತ್ತೆಯಾಗಿವೆ. ಆದರೆ ಭಾರತದಲ್ಲಿ ಇರುವ ಫೈಜರ್ ಕಂಪನಿ ತನಿಖೆಗೆ ಅಸಹಕಾರ, ಸೂಕ್ತ ದಾಖಲೆಗಳು ಮತ್ತು ಸೂಕ್ತ ಮಾಹಿತಿ ಒದಗಿಸುತ್ತಿಲ್ಲ. ಹೀಗಾಗಿ ನ್ಯೂಯಾರ್ಕ್ನಲ್ಲಿ ಇರುವ ಫೈಜರ್ ಕಂಪನಿಯ ಪ್ರಧಾನ ಕಚೇರಿಗೆ ಎಫ್ಡಿಎ ಆಯುಕ್ತ ಶ್ರೀನಿವಾಸ್ ಅವರು ಪತ್ರ ಬರೆದಿದ್ದಾರೆ.
ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧಿಗಳಲ್ಲಿ ತಮ್ಮ ಕಂಪನಿಯ ಔಷಧಿಗಳು ಪತ್ತೆಯಾಗಿವೆ. ಜೊತೆಗೆ ಫೈಜರ್ ಕಂಪನಿಯ ನಕಲಿ ಔಷಧಿಗಳು ತಯಾರಿಸುತ್ತಿದ್ದ ಅಕ್ರಮ ಘಟಕ ಪತ್ತೆಯಾಗಿದೆ. ಈ ಸಂಬಂಧ ಭಾರತದಲ್ಲಿ ಇರುವ ಫೈಜರ್ ಕಂಪನಿಗೆ ದಾಖಲೆಗಳನ್ನು ಕೇಳಿದ್ರೆ ಕೊಡುತಿಲ್ಲ. ತನಿಖೆಗೆ ಅಸಹಕಾರ ತೋರಿಸ್ತಿದೆ. ಹೀಗಾಗಿ ತನಿಖೆಗೆ ಸಹಕಾರ ನೀಡಿ, ದಾಖಲಾತಿಗಳನ್ನ ಸಲ್ಲಿಸಿ. ಅಸಲಿ ಔಷಧಿ ಜೊತೆ ನಕಲಿ ಮಿಕ್ಸ್ ಪತ್ತೆ ಹಚ್ಚುವುದೇ ಕಷ್ಟ ಆಗಿದೆ. ಫೈಜರ್ ಕಂಪನಿಯ ಔಷಧಗಳ ಮಾರಾಟ, ಸರಬರಾಜು ನಕಲಿ ಔಷಧಿಗಳ ವಿತ್ ಡ್ರಾ ಮಾಹಿತಿ ನೀಡ್ತಿಲ್ಲ. ಒಂದು ತಿಂಗಳಾದ್ರು ಪೈಜರ್ ಕಂಪನಿ ದಾಖಲೆಗಳನ್ನು ನೀಡಿಲ್ಲ, ಸಹಕರಿಸಿಲ್ಲ.
ತಕ್ಷಣದ ಡೇಟಾ ಸಲ್ಲಿಕೆ ಮಾಡಿ. ಭಾರತದಲ್ಲಿ ಇರುವ ಫೈಜರ್ ಸಂಸ್ಥೆಗೆ ಔಷಧಿಗಳ ಸರಬರಾಜು, ಎಲ್ಲೆಲ್ಲಿ ಮಾರಾಟ ಆಗಿದೆ, ವಿತ್ ಡ್ರಾ ಎಲ್ಲಿ ಆಗಿದೆ ಅಂತಾ 48 ಗಂಟೆಗಳ ಒಳಗಡೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




