
ಪ್ರಗತಿವಾಹಿನಿ ಸುದ್ದಿ: ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಪಲ್ಟಿಯಾಗಿ ಬಿದ್ದಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಕೊಪ್ಪ ಸಮೀಪದ ಹಲಕೊಟ್ಟಿಗೆ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ 7-8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಾವಣಗೆರೆಯ ನಿಟ್ಟುವಳ್ಳಿಯ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ಜನ ಮಹಿಳಾ ಪ್ರವಾಸಿಗರು ಕೊಲ್ಲೂರು- ಸಿಗಂದೂರು- ಬಳೆ ಪದ್ಮಾವತಿ ದೇವಸ್ಥಾನಕ್ಕೆ ಖಾಸಗಿ ಬಸ್ ಮಾಡಿಕೊಂಡು ಬಂದಿದ್ದರು. ಬಳೆ ಪದ್ಮಾವತಿ ದೇವಾಲಯಕ್ಕೆ ತೆರಳುವ ಮಾರ್ಗದ ಹಲಕೊಟ್ಟಿಗೆ ಕ್ರಾಸ್ ಬಳಿ ತೆರಳುತ್ತಿದ್ದಾಗ ಬಸ್ನ ಬ್ರೇಕ್ ಫೇಲ್ ಆಗಿ ಮನೆ ಮೇಲೆ ಬಿದ್ದಿದೆ.
ಮನೆ ಮೇಲೆ ಬಸ್ ಪಲ್ಟಿಯಾದ ಪರಿಣಾಮ ಮನೆಗೆ ಹಾನಿಯಾಗಿದೆ. ಗಾಯಾಳುಗಳಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




