Kannada NewsKarnataka NewsLatest

*ರಾಜ್ಯದಲ್ಲಿ 9 IAS / KAS ಅಧಿಕಾರಿಗಳ ವರ್ಗಾವಣೆ*: *ಕೃಷ್ಣ ಬಾಜಪೇಯಿ ಅಪೀಲೇಟ್ ಟ್ರಿಬ್ಯೂನಲ್ ಸದಸ್ಯ, ಲತಾ ಆರ್. ಹೌಸಿಂಗ್ ಬೋರ್ಡ್ ಆಯುಕ್ತರಾಗಿ ನೇಮಕ!*

* ರಾಜ್ಯದಲ್ಲಿ 9 IAS / KAS ಅಧಿಕಾರಿಗಳ ವರ್ಗಾವಣೆ: ಕೃಷ್ಣ ಬಾಜಪೇಯಿ ಅಪೀಲೇಟ್ ಟ್ರಿಬ್ಯೂನಲ್ ಸದಸ್ಯ, ಲತಾ ಆರ್. ಹೌಸಿಂಗ್ ಬೋರ್ಡ್ ಆಯುಕ್ತರಾಗಿ ನೇಮಕ!

*ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು, ಅ.17:*
ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ *8 ಮಂದಿ IAS ಮತ್ತು 1 KAS ಅಧಿಕಾರಿಗಳನ್ನು* ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್. ಅವರು ಈ ಆದೇಶ ಹೊರಡಿಸಿದ್ದಾರೆ.

*ವರ್ಗಾವಣೆಗೊಂಡ ಅಧಿಕಾರಿಗಳ ವಿವರ:*

*1. ಶ್ರೀ ಕೃಷ್ಣ ಬಾಜಪೇಯಿ, IAS (KN:2010)*
ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು *ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (Karnataka Appellate Tribunal), ಬೆಂಗಳೂರು ಇದರ ಸದಸ್ಯರಾಗಿ* ನೇಮಕ ಮಾಡಲಾಗಿದೆ. ಶ್ರೀಮತಿ ಭಾರತಿ ಡಿ., IAS ಅವರ ಅಪರ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗಿದೆ.

*2. ಶ್ರೀಮತಿ ಲತಾ ಆರ್., IAS (KN:2012)*
ಗ್ರೇಟರ್ ಬೆಂಗಳೂರು ಪ್ರದೇಶದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) ಆಗಿದ್ದ ಇವರು, *ಕರ್ನಾಟಕ ಗೃಹ ಮಂಡಳಿ (Karnataka Housing Board), ಬೆಂಗಳೂರು ಆಯುಕ್ತರಾಗಿ* ವರ್ಗಾವಣೆ.

*3. ಶ್ರೀಮತಿ ಅರ್ಚನಾ ಎಂ.ಎಸ್., IAS (KN:2012)*
ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು *ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL), ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರಾಗಿ* ನೇಮಕ. ಬಸವರಾಜು, KAS ವರ್ಗಾವಣೆ.

*4. ಶ್ರೀ ದಯಾನಂದ ಕೆ.ಎ., IAS (KN:2012)*
ಕರ್ನಾಟಕ ಗೃಹ ಮಂಡಳಿ ಆಯುಕ್ತರಾಗಿದ್ದ ಇವರನ್ನು *ಹಿಂದುಳಿದ ವರ್ಗಗಳ ಆಯುಕ್ತರಾಗಿ* ವರ್ಗಾವಣೆ ಮಾಡಲಾಗಿದೆ.

*5. ಶ್ರೀ ವೆಂಕಟ್ ರಾಜಾ, IAS (KN:2013)*
ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು *ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ* ನೇಮಕ. ಬಸವರಾಜು ಎ.ಬಿ., IAS ಅವರ ಅಪರ ಹೊಣೆಯಿಂದ ಬಿಡುಗಡೆ.

*6. ಶ್ರೀ ವೆಂಕಟೇಶ್ ಟಿ., IAS (KN:2015)*
ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು *ತೋಟಗಾರಿಕೆ ನಿರ್ದೇಶಕರು ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ನಿರ್ದೇಶಕರಾಗಿ* ನೇಮಕ. ಇಬ್ರಾಹಿಂ ಮೈಗೂರ್, IAS ವರ್ಗಾವಣೆ.

*7. ಶ್ರೀ ಇಬ್ರಾಹಿಂ ಮೈಗೂರ್, IAS (KN:2017)*
ತೋಟಗಾರಿಕೆ ನಿರ್ದೇಶಕರಾಗಿದ್ದ ಇವರನ್ನು *ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರಾಗಿ* ಖಾಲಿ ಹುದ್ದೆಗೆ ವರ್ಗಾವಣೆ.

*8. ಶ್ರೀಮತಿ ಮೋನಾ ರೋಟ್, IAS (KN:2019)*
ನಿಯೋಜನೆಗಾಗಿ ಕಾಯುತ್ತಿದ್ದ ಇವರನ್ನು *ಗ್ರೇಟರ್ ಬೆಂಗಳೂರು ಉತ್ತರ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) ಯಾಗಿ* ನೇಮಕ.

*9. ಶ್ರೀಮತಿ ಸಯ್ಯದಾ ಆಯಿಷಾ, KAS*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದ ಇವರನ್ನು *ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC) ವ್ಯವಸ್ಥಾಪಕ ನಿರ್ದೇಶಕರಾಗಿ* ನೇಮಕ. ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯ ಹಿನ್ನೆಲೆಯಲ್ಲಿ ಈ ವರ್ಗಾವಣೆಯು ಭಾರತ ಚುನಾವಣಾ ಆಯೋಗದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button