Kannada NewsKarnataka NewsLatest

*ವಜ್ರಮುಷ್ಠಿ ಕಾಳಗ ದಿಢೀರ್ ರದ್ದು*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗ ಇತಿಹಾಸದಲ್ಲೇ ಮೊದಲ ಬಾರಿ ರದ್ದು ಮಾಡಿರುವ ಘಟನೆ ನಡೆದಿದೆ.

ಹಲವು ಗೊಂದಲಗಳ ನಡುವೆ ಈ ಬಾರಿ ವಜ್ರಮುಷ್ಠಿ ಕಾಳಗ ರದ್ದು ಮಡಲಾಗಿದೆ. ನಾಲ್ಕು ಜನ ಜಟ್ಟಿಗಳು ರಾಜವಂಶಸ್ಥರಾದ ಯದುವೀರರ ಸಮ್ಮುಖದಲ್ಲಿ ಕಾಳಗ ನಡೆಸಲು ಸಿದ್ಧರಾಗಿದ್ದರೂ, ಸಮಯದ ಅಭಾವ ಮತ್ತು ವಿಳಂಬದಿಂದಾಗಿ ಈ ಸಂಪ್ರದಾಯ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೈಸೂರಿನ ಜಟ್ಟಿ ಮಹೇಶ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಾಳಗಕ್ಕೆ ಮುನ್ನ ಜಟ್ಟಿಗಳು ಮತ್ತು ಅವರ ಸಹಾಯಕರಿಗೆ ಅರಮನೆ ಆವರಣ ಪ್ರವೇಶಿಸಲು ಸಕಾಲದಲ್ಲಿ ಅನುಮತಿ ದೊರೆಯಲಿಲ್ಲ. ಬೆಳಗ್ಗೆ 8:30 ರಿಂದ 9 ಗಂಟೆಯ ಶುಭ ಮುಹೂರ್ತವಿದ್ದರೂ, ಪೊಲೀಸರು ಮತ್ತು ಅರಮನೆ ಆಡಳಿತದ ಸಮನ್ವಯ ಕೊರತೆಯಿಂದಾಗಿ 9 ಗಂಟೆಯ ನಂತರವಷ್ಟೇ ಜಟ್ಟಿಗಳಿಗೆ ಪ್ರವೇಶ ಸಿಕ್ಕಿತು. ಅಲ್ಲಿಯವರೆಗೆ ಕಾಳಗದ ಸಿದ್ಧತೆಗೆ ಬೇಕಾದ ಆಯುಧ ಕಟ್ಟುವಿಕೆ, ಮುಸ್ತಿಫ್ ಮಾಡುವಿಕೆಗಳಾಗಲಿಲ್ಲ.

ತರಬೇತಿ ಪಡೆದಿದ್ದ ಜಟ್ಟಿಗಳ ಆರು ತಿಂಗಳ ಶ್ರಮ ವ್ಯರ್ಥವಾಯಿತು ಎಂದು ಮಹೇಶ್ ಜಟ್ಟಿ ಅಳಲು ತೋಡಿಕೊಂಡಿದ್ದಾರೆ. ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತದೆ, ಆದರೆ ಈ ಬಾರಿ ಮುಹೂರ್ತ ಬೇಗ ಇದ್ದುದರಿಂದ ಕಾಳಗವೇ ರದ್ದಾಯಿತು ಎಂದು ತಿಳಿಸಿದ್ದಾರೆ.

ಮೈಸೂರು ದಸರಾದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಠಿ ಕಾಳಗ ಈ ಬಾರಿ ರದ್ದಾಗಿರುವುದಕ್ಕೆ ಹಲವೌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆಯೋಜಕರ್ ಈ ಬಗ್ಗೆ ಜವಾಬ್ದಾರಿ ತೆಗೆದುಕೊಂಡು ವಜ್ರಮುಷ್ಠಿ ಕಾಳಗ ನಡೆಯುವಂತೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button