
ಶಿಕ್ಷಕರ ಸಂಘದ ಬೇಡಿಕೆಗೆ ಮನ್ನಣೆ ಇಲ್ಲ: ದಸರಾ ರಜೆ ವಿಸ್ತರಣೆ ಪ್ರಸ್ತಾವ ತಿರಸ್ಕಾರ
ಕೆಎಸ್ಪಿಎಸ್ಟಿಎ ಮನವಿಗೆ ಸರ್ಕಾರದ ನಕಾರ – ಶಾಲೆಗಳ ಪುನರಾರಂಭದ ಕುರಿತು ಶಿಕ್ಷಕರು, ವಿದ್ಯಾರ್ಥಿಗಳ ಗೊಂದಲ ನಿವಾರಣೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯದ ಶಿಕ್ಷಕರ ದಸರಾ ರಜೆಯನ್ನು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (KSPSTA) ಮುಂದಿಟ್ಟಿದ್ದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಲಭ್ಯವಿರುವ ಮಾಹಿತಿಯಿಂದ ತಿಳಿದುಬರುತ್ತದೆ.
ದಸರಾ ರಜೆಯನ್ನು ವಿಸ್ತರಿಸುವಂತೆ ಕೆಎಸ್ಪಿಎಸ್ಟಿಎ ಸಂಘಟನೆಯು ಸರ್ಕಾರದ ಗಮನ ಸೆಳೆದಿತ್ತು. ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡುವೆ ಈ ವಿಷಯ ಚರ್ಚೆಗೆ ಬಂದಿದ್ದು, ರಜೆ ವಿಸ್ತರಣೆಯ ಕುರಿತು ನಿರ್ಧಾರ ಕೈಗೊಳ್ಳುವಂತೆ ಸಂಘವು ಮನವಿ ಮಾಡಿತ್ತು.
ಆರಂಭಿಕವಾಗಿ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತಾದರೂ ಅಂತಿಮವಾಗಿ ತಿರಸ್ಕರಿಸಲ್ಪಟ್ಟಿದೆ ಎಂದು ಗೊತ್ತಾಗಿದೆ.
ಶಿಕ್ಷಕರ ಸಂಘದ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಹೀಗಾಗಿ, ದಸರಾ ರಜೆ ವಿಸ್ತರಣೆಯಾಗುವ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ನಿರಾಸೆಯಾಗಿದೆ.
*ಶಾಲೆಗಳ ಪುನರಾರಂಭದ ಬಗ್ಗೆ ಗಮನ*
ದಸರಾ ರಜೆ ವಿಸ್ತರಣೆಯ ಬೇಡಿಕೆ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ, ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿದೆ. ಶಾಲೆಗಳ ಪುನರಾರಂಭದ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ.
ಶಿಕ್ಷಕರ ಸಂಘದ ಬೇಡಿಕೆ ತಿರಸ್ಕೃತಗೊಂಡಿರುವುದರಿಂದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲ ನಿವಾರಣೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




