LatestNationalPolitics

*ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಪಾಟ್ನಾದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕರಣವಾಗಿದ್ದು, “ಮೋದಿ ಕಾ ಬಾಪ್‌ ಭಿ ಜಾಯೆಗಾ” (ಮೋದಿ ಅವರ ಅಪ್ಪನೂ ಹೋಗಬೇಕಾಗುತ್ತದೆ) ಎಂಬ ಖರ್ಗೆ ಹೇಳಿಕೆ ವಿರುದ್ಧ, ಆಡಳಿತಾರೂಢ ಬಿಜೆಪಿ ದೂರು ದಾಖಲಿಸಿದೆ.

ಪ್ರಧಾನಿ ಮೋದಿ ಅವರ ದಿವಂಗತ ತಂದೆಗೆ ಅವಮಾನ ಮಾಡಿದ ಆರೋಪದಡಿ, ಬಿಜೆಪಿಯು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಾಟ್ನಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ಅಲ್ಲದೇ 24 ಗಂಟೆಗಳಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಖರ್ಗೆ ಅವರ ಈ ಹೇಳಿಕೆಗಳು ಪ್ರಧಾನಿ ಮೋದಿ ವಿರುದ್ಧದ ವೈಯಕ್ತಿಕ ದಾಳಿ ಎಂದು ಬಿಜೆಪಿ ತಿಳಿಸಿದೆ. ಪಾಟ್ನಾದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡುತ್ತಾ, ಮಲ್ಲಿಕಾರ್ಜುನ ಖರ್ಗೆ ಅವರು “ಪ್ರಧಾನಿ ಮೋದಿ ಅವರು ಜೈಲಿಗೆ ಹೋಗಲಿದ್ದಾರೆ” ಎಂದು ಹೇಳಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಸಂತೋಷ್‌ ಕುಮಾರ್‌ ಎಂಬಾತ “ಮೋದಿ ಎಲ್ಲಿಯೂ ಹೋಗುವುದಿಲ್ಲ” ಎಂದು ಕೂಗಿ ಹೇಳಿದರು. ಇದಕ್ಕೆ ಸಿಟ್ಟಾದ ಖರ್ಗೆ, “ಮೋದಿ ಅವರ ಅಪ್ಪನೂ ಹೋಗಬೇಕು” ಎಂದು ಗುಡುಗಿದರು. ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button