*ಅ.28ರಂದು ಬೆಳಗಾವಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವತಿಯಿಂದ 33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಐಎಸ್‌ಆರ್‌ಎಂ-2 ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ರೈಲ್ವೆ ಗೇಟ್, ಖಾನಾಪುರ ರಸ್ತೆ, ಸರಾಫ್ ಗಲ್ಲಿ, ಆರ್‌ಪಿಡಿ ಅಡ್ಡ ರಸ್ತೆ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ಹಿಂದಿನ ಪ್ರದೇಶ, ವಡ್ಡರಗಲ್ಲಿ, ಜಕ್ಕೇರಿ ಹೊಂಡಾ, ಇಂದ್ರಪ್ರಸ್ಥ, ಸರ್ವೋದಯ ಹಾಸ್ಟೆಲ್ ಹಿಂಭಾಗ, ಗೂಡ್‌ಶೆಡ್ ರಸ್ತೆ, ಖಾನಾಪುರ ರಸ್ತೆ, ಎಂಇಎಸ್ ಸಂಪೂರ್ಣ ಮಿಲಿಟರಿ ಪ್ರದೇಶ ಹಾಗೂ ಜೆಲ್ ವಿಂಗ್ ಎಕ್ಸ್‌ಪ್ರೆಸ್ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಬೆಳಗಾವಿ ವಿಭಾಗದ ಕಾರ್ಯ ಮತ್ತು ಪಾಲನೆ ವಿಭಾಗದ ನಗರ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




